ಮಂಗಳೂರು, ಫೆ. 08 (DaijiworldNews/AA): ನಗರದ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ತಾಂತ್ರಿಕ ದೋಷದಿಂದ ಕಾರೊಂದು ಹೊತ್ತಿ ಉರಿದಿದ್ದು, ಅದೃಷ್ಟವಶಾತ್, ಚಾಲಕ ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.


ಅವಘಡದಲ್ಲಿ ಮಂಗಳೂರಿನ ಮಣ್ಣಗುಡ್ಡೆ ನಿವಾಸಿ, ಕಾರಿನ ಮಾಲಕ ಮುನ್ನ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಅಪಘಾತದ ವೇಳೆ ಕಾರಿನ ಮಾಲಕ ಮುನ್ನ ಶೆಟ್ಟಿ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಸಾರ್ವಜನಿಕರ ಸಹಕಾರದಿಂದ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಹೊರ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿನ ಇಂಜಿನ್, ಬ್ಯಾಟರಿ, ರೇಡಿಯೇಟರ್, ಎಸಿ ಹಾಗೂ ಡ್ಯಾಷ್ ಬೋರ್ಡ್ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ.