ಕಾಸರಗೋಡು, ಫೆ. 03 (DaijiworldNews/AK):ಮಂಜೇಶ್ವರದ ಕುಂಜತ್ತೂರಿನ ತೂಮಿನಾಡಿನಲ್ಲಿ ತಂದೆಯಿಂದಲೇ ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಶೇಕುಂಞ(50) ಮೃತಪಟ್ಟಿದ್ದಾರೆ.

ಕುಟುಂಬ ಕಲಹದ ನಡುವೆ ಕತ್ತಿ ಕಾಳಗ ನಡೆಯುವ ಸಂದರ್ಭದಲ್ಲಿ ಅಡ್ಡ ಬಂದ ಪುತ್ರಿ ಜುಮೈರಾಳನ್ನೆ ತಂದೆ ಕಡಿದಿದ್ದು, ಜುಮೈರಾ ಸ್ಥಳದಲ್ಲಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಜುಮೇರಾಳ ದೊಡ್ಡಪ್ಪ ಶೇಕುಂಞ(50) ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಕರಣದ ಕೊಲೆ ಆರೋಪಿ ಉಮರ್ನನ್ನು ಪೊಲೀಸರು ಬಂಧಿಸಿದ್ದಾರೆ
ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ 18 ವರ್ಷದ ಮಗಳನ್ನು ತಂದೆ ಕಡಿದು ಕೊಲೆಗೈದ ನಿನ್ನೆ ಸಂಜೆ ಘಟನೆ ನಡೆದಿದೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.