ಮಂಗಳೂರು, ಜ. 31 (DaijiworldNews/TA): ಕೇಂದ್ರದ ಬಜೆಟ್ ಮಂಡನೆಗೆ ಮುಂಚಿತವಾಗಿ ನಗರದ ಸಾಮಾಜಿಕ ಕಾರ್ಯಕರ್ತ ಜಿಕೆ ಭಟ್ ಕೇಂದ್ರಕ್ಕೆ ಅನೇಕ ಮನವಿ ಮಾಡಿದ್ಧಾರೆ.

ಆದಿತ್ಯವಾರ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2026-27 ನೇ ಸಾಲಿನ ಕೇಂದ್ರದ ಬಜೆಟ್ ಅನ್ನು ಮಂಡಿಸುತ್ತಿದ್ದು, ದೇಶದ ಜನತೆ ಹೆಚ್ಚಿನ ನಿರೀಕ್ಷೆಯಿಂದ ಮುಂದೆ ನೋಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಿಕೆ ಭಟ್ ಅವರು, ಮಂಗಳೂರಿನಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟಂತೆ ಎಕ್ಸ್ ಪೋರ್ಟ್ ಹಬ್ ಆರಂಭಿಸಬೇಕಿದೆ. ಅಲ್ಲದೆ ಇಲ್ಲಿನ ಪ್ರವಾಸೋದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಅಲ್ಲದೆ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜೊತೆ ವಿಲೀನಗೊಳಿಸಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಕಳೆದ ಕೆಲ ವರ್ಷಗಳಿಂದ ಫೆಬ್ರವರಿ 1 ರಂದು ಕೇಂದ್ರದ ಬಜೆಟ್ ಮಂಡಿಸಲಾಗುತ್ತಿದೆ. ಈ ಭಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಆದರೂ, ಭಾನುವಾರವೇ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ನಾಳೆ ಷೇರು ಮಾರುಕಟ್ಟೆ ಓಪನ್ ಇರಲಿದ್ದು, ವಹಿವಾಟು ನಡೆಸಲಿದೆ.