ಸುಳ್ಯ, ಜ.30 (DaijiworldNews/TA): ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ರಾತ್ರಿ ವೇಳೆ ಕೃಷಿ ತೋಟಕ್ಕೆ ನುಗ್ಗಿ ಅಪಾರ ಕೃಷಿ ನಾಶ ಮಾಡಿದ ಘಟನೆ ಜ.28 ರಂದು ಸಂಭವಿಸಿದೆ.

ಜ. 28 ರಂದು ಸುಮಾರು ರಾತ್ರಿ 12 : 30 ರ ವೇಳೆ ಗೂನಡ್ಕದ ಪ್ರಮೀಳಾ ಪೆಲ್ತಡ್ಕ ಅವರ ಮನೆಯ ಮುಂಭಾಗದಲ್ಲಿ ಆನೆ ಹಿಂಡು ಕಾಣಿಸಿಕೊಂಡಿದೆ. ಈ ವೇಳೆ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದು, ಸಿಡಿಮದ್ದು ಹೊಡಿಸಿ ಆನೆಗಳನ್ನು ಓಡಿಸಿದ್ದಾರೆ. ಆದರೆ ಆನೆ ಹಿಂಡು ತೋಟಕ್ಕೆ ನುಗ್ಗಿ , ತೆಂಗು, ಅಡಿಕೆ , ಬಾಳೆ ಗಿಡಗಳನ್ನು ಸಂಪೂರ್ಣ ಹಾನಿಮಾಡಿದೆ. ಅಲ್ಲದೆ ಗಣೇಶ , ಜಗನ್ನಾಥ, ವಸಂತ ಪೆಲ್ತಡ್ಕ , ಮನಮೋಹನ ಅವರ ತೋಟಕ್ಕೆ ನುಗ್ಗಿ ಸಂಪೂರ್ಣ ಹಾನಿ ಮಾಡಿದೆ.
ಇದರಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾನಿಗೊಳಗಾದ ಕೃಷಿಕರ ತೋಟಕ್ಕೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಆನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಎಚ್ಚೆತ್ತಿಕೊಳ್ಳಬೇಕಾಗಿ ಹಾಗೂ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ಒದಗಿಸಬೇಕಾಗಿ ಕೃಷಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.