ಸುಳ್ಯ, ಜ. 21 (DaijiworldNews/ TA): ತಾಲೂಕು ರಚನೆಯಾಗಿ 60 ವರ್ಷ ಕಳೆದಿದ್ದು 1965 ಡಿಸೆಂಬರ್ 17 ರಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪರವರು ಸುಳ್ಯಕ್ಕೆ ಬಂದು ತಾಲೂಕನ್ನು ಉದ್ಘಾಟಿಸಿದ್ದರು.

ತಾಲೂಕು 60 ವರ್ಷ ಪೂರೈಸುವ ಈ ಸಂದರ್ಭದಲ್ಲಿ ತಾಲೂಕಿನ ಷಷ್ಟ್ಯಬ್ಧ ಆಚರಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಜ.21ರಂದು ಆಯೋಜಿಸಲಾಗಿರುವ ಷಷ್ಟ್ಯಬ್ಧ ಕಾರ್ಯಕ್ರಮವನ್ನು ಪಕ್ಷಭೇದ ಮರೆತು ಎಲ್ಲರೂ ಸೇರಿ ಯಶಸ್ವಿ ಮಾಡಬೇಕು " ಎಂದು ಷಷ್ಟ್ಯಬ್ಧ ಆಚರಣಾ ಸಮಿತಿ ಅಧ್ಯಕ್ಷರಾದ ಶಾಸಕಿ ಕು.ಭಾಗೀರಥಿ ಮುರುಳ್ಯ ಕೇಳಿಕೊಂಡಿದ್ದಾರೆ.
ಸುಳ್ಯದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜ 21 ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯದ ಶಾಸ್ತ್ರಿ ಸರ್ಕಲ್ನಿಂದ ಪರಿವಾರಕಾನದಲ್ಲಿರುವ ಶ್ರೀ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.