ಕಾಸರಗೋಡು, ಜ. 19 (DaijiworldNews/TA): ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು 29 ಪವನ್ ಚಿನ್ನಾಭರಣ , 25 ಸಾವಿರ ರೂ.ಮೌಲ್ಯದ ಬೆಳ್ಳಿ ಹಾಗೂ ಐದು ಸಾವಿರ ರೂ.ನಗದು ಕಳವುಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ರವಿವಾರ ನಡೆದಿದೆ.

ಮನೆಯ ಹಿಂಭಾಗ ಬಾಗಿಲು ಮುರಿದು ಈ ಕೃತ್ಯ ನಡೆಸಲಾಗಿದೆ. ನ್ಯಾಯವಾದಿ ಚೈತ್ರ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಕುಟುಂಬಸ್ಥರು ಸಂಜೆ ಕುಂಬಳೆಯ ದೇವಸ್ಥಾನಕ್ಕೆ ತೆರಳಿದ್ದು, ಒಂದೂವರೆ ಗಂಟೆ ಕಳೆದು ಮನೆಗೆ ಮರಳಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಸಂಜೆ 6.30 ರಿಂದ 8 ಗಂಟೆಯ ನಡುವೆ ಈ ಕೃತ್ಯ ನಡೆದಿದೆ. ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.