ಬಂಟ್ವಾಳ, ಜ. 19 (DaijiworldNews/AK): ಜಗತ್ತಿಗೆ ಬದುಕಲು ಬೆಳಕು ನೀಡಿದ ದೇಶ ಭಾರತವಾಗಿದ್ದು, ಹಾಗಾಗಿ ಸಂಸ್ಕೃತಿಗಳ ಸಂಪತ್ತದ್ಬರಿತವಾದ ಭಾರತವನ್ನು ಭಾರತವಾಗಿ ಉಳಿಸಲು ಹಿಂದೂ ಸಂಗಮದಂತಹ ಕಾರ್ಯಕ್ರಮಗಳು ಅಗತ್ಯವಿದೆ. ಎಂದು ಶ್ರೀ ಜಗದ್ಗುರು ರಾಘವೇಂದ್ರ ಪೀಠ ಕರಿಂಜೆ ಮಠದ ಶ್ರೀ ಶ್ರೀ ಮುಕ್ತಾನಂದ ಶ್ರೀಗಳವರು ಹೇಳಿದ್ದಾರೆ.

ಅವರು ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಚೆನ್ನೈತೋಡಿ ಮಂಡಲದ ಆಲದಪದವಿನ ಶ್ರೀನಿವಾಸನಗರದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ್ ಎಂ. ಭಾರತ ಮಾತೆಗೆ ಪುಷ್ಪಾರ್ಚನೆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯೋಗ ಶಿಕ್ಷಕಿ ಶಶಿಕಲ ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶೋಭಾಯಾತ್ರೆಯ ಚಾಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದ್ದಾರೆ.