ಬಂಟ್ವಾಳ, ಜ.18 (DaijiworldNews/TA): ಬಿ.ಸಿ.ರೋಡಿನ ಶ್ರೀ ಶಕ್ತಿ ಭವನ ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಜಿಲ್ಲಾ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕಿಶೋರಿಯರ ಬಲವರ್ಧನಾ ತರಬೇತಿ ಕಾರ್ಯಕ್ರಮ ನಡೆಸಲಾಯಿತು.




ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸುಮನ ಕ್ರಾಸ್ತಾ ಇವರು ಹೆಣ್ಣು ಮಕ್ಕಳ ಆರೋಗ್ಯ ವೈಯಕ್ತಿಕ ಸ್ವಚ್ಛತೆ ಮತ್ತು ಸಮಸ್ಯೆಗೆ ಪರಿಹಾರಗಳು ಹಾಗೂ ವ್ಯಾಯಾಮಗಳ ಬಗ್ಗೆ ಅರಿವು ಮೂಡಿಸಿದರು. ನಗರ ವೈದ್ಯಾಧಿಕಾರಿ ಡಾಕ್ಟರ್ ಅಶ್ವಿನಿ ಅವರು ಹೆಣ್ಣು ಮಕ್ಕಳ ಆರೋಗ್ಯ ಪೌಷ್ಟಿಕಾಂಶ ಆಹಾರದ ಬಗ್ಗೆ ರಕ್ತ ಹೀನತೆಯ ಬಗ್ಗೆ ಮಾಹಿತಿ ನೀಡಿದರು. ವಕೀಲರಾದ ಆಶಾಮಣಿ ರೈ ಅವರು ಬಾಲ್ಯ ವಿವಾಹ ಕಾಯ್ದೆ ಪೋಕ್ಸೋ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಇದರ ಬಗ್ಗೆ ತಿಳಿಸಿಕೊಟ್ಟರು.
ಕಿಶೋರಿಯರಿಗೆ ಈ ಕಾರ್ಯಕ್ರಮದ ಅಂಗವಾಗಿ ಭಾಷಣ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು .ಕಾರ್ಯಕ್ರಮದ ಬಗ್ಗೆ ಮಕ್ಕಳು ಅನಿಸಿಕೆಯನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿಯರಾದ ಗುಣವತಿ , ನಿತಕುಮಾರಿ ಮುಬಿನಾ ಭಾನು ಅಂಗನವಾಡಿ ಕಾರ್ಯಕರ್ತೆಯರು ಕಿಶೋರಿಯರು ಆಪ್ತಸಮಾಲೋಚಕಿ ವಿದ್ಯಾರರವರು ಉಪಸ್ಥಿತರಿದ್ದರು.