ಕಾಸರಗೋಡು, ಜ. 17 (DaijiworldNews/TA): ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆ ಮವ್ವಾರ್ ನಲ್ಲಿ ಒಂಟಿ ವೃದ್ಧೆಯ ಸಾವು ಕೊಲೆ ಎಂದು ಮರಣೋತ್ತರ ಪರೀಕ್ಷೆ ಯಿಂದ ಸಾಬೀತಾಗಿದ್ದು, ಈ ಹಿನ್ನೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬದಿಯಡ್ಕ ಪೆರಡಾಲದ ರಮೇಶ್ ನಾಯ್ಕ್ (47) ಬಂಧಿತ ಆರೋಪಿ. ಮವ್ವಾರ್ ಅಜಿಲದ ಪುಷ್ಪಲತಾ ಶೆಟ್ಟಿ (70) ಕೊಲೆಗೀಡಾ ದವರು. ಬುಧವಾರ ಬೆಳಿಗ್ಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಇದೊಂದು ಕೊಲೆ ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆಯಿಂದ ಸಾಬೀತಾಗಿತ್ತು. ಕತ್ತು ಹಿಸುಕಿ ಕೊಲೆ ಗೈದಿದ್ದು, ಕುತ್ತಿಗೆಯಲ್ಲಿದ್ದ ನಾಲ್ಕು ಪವನ್ ನ ಚಿನ್ನಾಭರಣವನ್ನು ದರೋಡೆ ಮಾಡಿದ್ದನು.
ಆರೋಪಿಯ ಬಗ್ಗೆ ಲಭಿಸಿದ ಸುಳಿವಿನ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಈತನನ್ನು ವಶಕ್ಕೆ ಪಡೆದ ಬದಿಯಡ್ಕ ಠಾಣಾ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಗೀಡಾ ದ ಮಹಿಳೆಯ ಈತನ ಕೈಗೆ ಕಚ್ಚಿದ ಗಾಯವಾಗಿದ್ದು,ಇದು ತನಿಖೆಗೆ ನೆರವಾಗಿದೆ.ಮಹಿಳೆಯ ಕುತ್ತಿಗೆ, ಮುಖ ಹಾಗೂ ಹಾಲಿನಲ್ಲಿ ರಕ್ತದ ಕಲೆಗಳು ಕಂಡುಬಂದಿತ್ತು. ಈತ ಬಚ್ಚಿಟ್ಟಿದ್ದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಆರೋಪಿ ಕೂಲಿ ಕಾರ್ಮಿಕನಾಗಿದ್ದನು.