ಬಂಟ್ವಾಳ, ಜ. 11 (DaijiworldNews/AA): ಕರ್ನಾಟಕ ಸರ್ಕಾರದ ಸಚಿವರಾಗಿದ್ದ, ಸ್ಥಳೀಯ ಮಾಜಿ ಶಾಸಕರಾದ ಬಿ ರಮಾನಾಥ ರೈ ಅವರ ವಿಶೇಷ ಅನುದಾನದಿಂದ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿರುವ ನವೀಕೃತ ಸಂತ ಪ್ಯಾಟ್ರಿಕ್ ಚರ್ಚ್ಗೆ ನಿರ್ಮಾಣಗೊಂಡ ನೂತನ ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ನೆರವೇರಿತು.




20 ಅಡಿ ಅಗಲದ ಸುಮಾರು 180 ಮೀಟರ್ ಉದ್ದದ ರೂಪಾಯಿ 15 ಲಕ್ಷ ರೂ. ಅನುದಾನದ ಈ ರಸ್ತೆಯನ್ನು ಸ್ವತಃ ಬಿ ರಮಾನಾಥ ರೈ ಅವರು ಉದ್ಘಾಟಿಸಿ ಈ ಕ್ಷೇತ್ರದ ಮೇಲೆ ತಾವು ಬಹಳಷ್ಟು ವರ್ಷಗಳಿಂದ ಇಟ್ಟುಕೊಂಡ ಅಭಿಮಾನವನ್ನು ಸ್ಮರಿಸಿದರು. ಮಾತ್ರವಲ್ಲ ಇಲ್ಲಿನ ಧರ್ಮ ಗುರುಗಳ ಸರಳತೆ ಹಾಗೂ ಕಾಯಕ ಪ್ರವೃತ್ತಿಗೆ ಅಭಿನಂದಿಸಿದರು. ಸಿದ್ಧಕಟ್ಟೆ ಮತ್ತು ತಮ್ಮ ಹಿರಿಯರ ಶೈಕ್ಷಣಿಕ ಬೆಳವಣಿಗೆಯಲ್ಲಿ ಇರುವ ಋಣಾನುಬಂಧವನ್ನು ಸ್ಮರಿಸಿ ದೇವಾಲಯದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ರಸ್ತೆಗಾಗಿ ಶ್ರಮಿಸಿದ ಲೆವಿನ್ ಇಲೆಕ್ಟ್ರಿಕಲ್ಸ್ ಮಾಲಕರಾದ ಪಿಯುಸ್ ಎಲ್ ರೋಡ್ರಿಗಸ್, ವಲಯ ಅಧ್ಯಕ್ಷರಾದ ಜಯಕರ ಶೆಟ್ಟಿ, ಅವರನ್ನು ಗೌರವಿಸಲಾಯಿತು. ಮುಖಂಡರಾದ ದೇವಪ್ಪ ಕರ್ಕೇರ, ಶಿವಾನಂದ ರೈ, ದೇವಪ್ಪ ಕರ್ಕೇರ, ಡೆನ್ಜಿಲ್ ಅಲ್ಲಿಪಾದೆ, ಸೀತಾರಾಮ ಶೆಟ್ಟಿ, ಬೆನೆಡಿಕ್ಟಾ ಡಿಕೋಸ್ತ, ಮೈಕಲ್ ಮೊರಾಸ್, ಅನಿಲ್ ಡಿಸೋಜ ಎಲ್ಪೇಲ್, ಅನಿಲ್ ರಾಯಿ, ಕೆ.ಪಿ ಲೋಬೋ, ಅಶೋಕ್ ಪೂಜಾರಿ, ರಾಜೇಶ್ ಪೂಜಾರಿ ದಾಮೋದರ ಪೂಜಾರಿ, ಗಣೇಶ್ ನಾಯಕ್ ಕರ್ಪೆ, ರಾಜನ್ ಸಾಂತ್ಮಾಯೊರ್ ಚರ್ಚ್ ಪಾಲನ ಮಂಡಳಿಯ ಸದಸ್ಯರು, ಗುರಿಕಾರರು, ಪ್ರವೀಣ್ ಕ್ರಾಸ್ತಾ, ಜೆರಾಲ್ಡ್ ಡಿಕೋಸ್ಟ ಉಪಸ್ಥಿತರಿದ್ದರು.
ಧರ್ಮ ಗುರುಗಳಾದ ವಂದನೀಯ ಡೇನಿಯಲ್ ಡಿಸೋಜ ಅವರು ಈ ಬೃಹತ್ ಕೊಡುಗೆಗಾಗಿ ಕೃತಜ್ಞತೆಗೈದರು. ಪಾಲನ ಪರಿಷತ್ ಉಪಾಧ್ಯಕ್ಷರಾದ ಸುನಿಲ್ ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಪ್ರವೀಣ್ ಕುಟಿನ್ಹಾ ನಡೆಸಿಕೊಟ್ಟರು.