ಮಂಗಳೂರು, ಜ. 11 (DaijiworldNews/AA): ಸರಕು ಸಾಗಣೆ ಲಾರಿಯೊಂದು ಜೀಪಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಜನವರಿ 10ರಂದು ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಹೆದ್ದಾರಿಯ ತೆರೆದ ಡಿವೈಡರ್ ಬಳಿ ಈ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಜೀಪಿನ ಮುಂಭಾಗವು ಡಿವೈಡರ್ ಮೇಲೆ ಏರಿದ್ದು, ವಾಹನದ ಚಕ್ರಗಳು ಕಿತ್ತುಬಂದಿವೆ. ಅಲ್ಲದೆ ಜೀಪಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಅದೃಷ್ಟವಶಾತ್, ಈ ಅಪಘಾತದಲ್ಲಿ ಜೀಪಿನ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.