ಉಳ್ಳಾಲ, ಜ. 11 (DaijiworldNews/TA): ಹಿಮವೊಂದನ್ನು ಬಿಟ್ಟರೆ ಉಳಿದೆಲ್ಲವೂ ಕರಾವಳಿಯಲ್ಲಿ ಇದೆ. ಕರಾವಳಿಯ ಸಸಿಹಿತ್ಲು ನೈಸರ್ಗಿಕವಾಗಿ ಸಾಹಸಮಯ ಕ್ರೀಡೆಗಳಿಗೆ ಪೂರಕವಾಗಿದೆ. ಇಲ್ಲಿ ಪ್ರಕೃತಿ ಹಾಗೂ ಭೌಗೋಳಿಕ ದೃಷ್ಣಿಯಿಂದ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಕರಾವಳಿ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಉಳ್ಳಾಲ ಕೇವಲ ಕರಾವಳಿಯ ಪೇಟೆಯಲ್ಲ. ಉಳ್ಳಾಲವನ್ನು ಹೆರಿಟೇಜ್ ವಿಲೇಜ್ ಎಂದು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.