ಮಂಗಳೂರು, ಜ. 10 (DaijiworldNews/TA): ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರದಿಂದ ಆಧಾರರಹಿತವಾಗಿ ಮರದ ದಿಮ್ಮಿಗಳನ್ನು ಮಂಗಳೂರಿಗೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ವಿನಯ್ ಕುಮಾರ್ , ಪ್ರವೀಣ್ ಪಿ, ಗಸ್ತು ಅರಣ್ಯ ಪಾಲಕರಾದ ವಿನಯ ಚಂದ್ರ ,ಶಿವಾನಂದ ಕುದುರಿ ,ಜಗದೀಶ್ ಕೆಎನ್, ಹಾಗೂ ಚಾಲಕ ಕಿಶೋರ್ ಮತ್ತು ಸಿಬ್ಬಂದಿಗಳಾದ ದಿನೇಶ್ ಪಾಲ್ಗೊಂಡಿದ್ದರು. ವಾಹನ ಮತ್ತು ಸೊತ್ತಿನ ಮೌಲ್ಯವು ಸುಮಾರು ಏಳರಿಂದ ಎಂಟು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ .
ಸದರಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂತೋನಿ ಎಸ್ ಮರಿಯಪ್ಪ ಇವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಇವರ ನಿರ್ದೇಶನದಂತೆ ವಲಯ ಅಧಿಕಾರಿಗಳಾದ ರಾಘವೇಂದ್ರ ಹೆಚ್. ಪಿ ಕಾರ್ಯಾಚರಣೆ ನಡೆದಿದೆ.