ಸುಳ್ಯ, ಜ. 09 (DaijiworldNews/TA): ತಾಲೂಕು ಪಂಚಾಯತ್ ತ್ರೈ ಮಾಸಿಕ ಕೆಡಿಪಿ ಸಭೆ ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಸುಳ್ಯದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕೆಲದಿನಗಳ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮಗುವೊಂದು ಸಾವನ್ನಪ್ಪಿದ್ದು,ಸಾವಿಗೆ ಕಾರಣ ಏನೆಂದು ತ್ರೈಮಾಸಿಕ ಕೆ.ಡಿ.ಪಿ ನಾಮನಿರ್ದೆಶಿತ ಸದಸ್ಯ ಧರ್ಮಪಾಲ ಕೊಯಿಂಗಾಜೆಯವರು ಪ್ರಶ್ನಿಸಿದರು.ಆಗ ತಾಲೂಕು ಆರೋಗ್ಯ ವೈದ್ಯಾಧಿಕಾರಿಯವರು ಸಮನ್ವಯತೆಯ ಕೊರೆತೆಯಿಂದ ಹೀಗೆ ಆಗಿರಬೇಕು.ಹೆಚ್ಚಿನ ಮಾಹಿತಿ ಆಸ್ಪತ್ರೆಯ ವೈದ್ಯಾಧಿಕಾರಿಯವರಿಗೆ ಗೊತ್ತಿದೆ ಎಂದು ಉತ್ತರಿಸಿದರು.ಆಗ ಧರ್ಮಪಾಲರು ನಮಗೆ ಸ್ಪಷ್ಟ ಮಾಹಿತಿ ಬೇಕು.ಆಡಳಿತ ವೈದ್ಯಾಧಿಕಾರಿ ಬರಬೇಕು ಪಟ್ಟುಹಿಡಿದರು.
ಆಗ ಶಾಸಕಿ ಭಾಗಿರಥಿ ಮುರುಳ್ಯರು ಆಡಳಿತ ವೈದ್ಯಾಧಿಕಾರಿಯನ್ನು ಸಭೆಗೆ ಕರೆಯಿಸಿಕೊಳ್ಳು ಸೂಚಿಸಿದರು.ಬಳಿಕ ಸಭೆಗೆ ಆಗಮಿಸಿದ ಆಡಳಿತ ವೈದ್ಯಾಧಿಕಾರಿ ಸಭೆಗೆ ಆಗಮಿಸಿ ಮಗುವಿನ ಸಾವು ಪ್ರಕರಣದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ತನಿಖೆ ಮಾಡಿ ವರದಿ ತೆಗೆದುಕೊಂಡು ಹೋಗಿದ್ದಾರೆ.ವರದಿ ಬರಬೇಕಾಷ್ಟೆ ಎಂದು ಹೇಳಿದರು.ಇದಲ್ಲದೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆದವು.