ವಿಟ್ಲ, ಜ. 09 (DaijiworldNews/TA): ಮೇಯಲು ಹೋಗಿದ್ದ ಹಸುಗಳ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ. ಮಂಗಳೂರು ತಾಲೂಕಿನ ಉಳ್ಳಾಲ ನಿವಾಸಿ ಝಲ್ಫಾನ್ ಮಾಲಿಕ್ ( 30) ಎಂಬಾತನನ್ನು ಬಂಧಿಸಿದ್ದಾರೆ.

ಈತ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಅವಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ್ ಎಂಬವರ ಒಟ್ಟು 4 ದನಗಳನ್ನು ಕಳ್ಳತನ ಮಾಡಿದ ಅರೋಪಿಯಾಗಿದ್ದು,ಈತನನ್ನು ವಿಟ್ಲ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ