ಕಾರ್ಕಳ , ಜ. 08 (DaijiworldNews/AK): ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ಎಂಬಲ್ಲಿ ಚಂದು ಪರವ(70) ಪ್ಯಾರಲಿಸ್ ನಿಂದ ಕೈ ಕಾಲು ಬಲವಿಲ್ಲದೆ 30ಆಡಿ ಬಾವಿಗೆ ಬಿದ್ದಿರುವ ಘಟನೆ ಸಂಭವಿಸಿದೆ.



ತಕ್ಷಣ ಕಾರ್ಕಳ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ, ಹರಿಪ್ರಸಾದ್, ಮುಜಂಬಿಲ್, ದಿನೇಶ್ ಗಣೇಶ್ ಅವರು ಕಾರ್ಯಚರಣೆ ನಡೆಸಿ ವೃದ್ದನನ್ನು ರಕ್ಷಿಸಲಾಯಿತು.