ಉಡುಪಿ, ಜ. 07 (DaijiworldNews/AA): ಉಡುಪಿ ನಗರ ಪೊಲೀಸ್ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ನಿಲೇಶ್ ಚೌಹಾಣ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ್ ಬಡಿಗೇರ್ ಅವರು ಬೆಳಗಾವಿಗೆ ವರ್ಗಾವಣೆಗೊಂಡ ಕಾರಣ ಈ ಸ್ಥಾನವು ತೆರವಾಗಿತ್ತು. ಈ ಹಿನ್ನೆಲೆಯಲ್ಲಿ, ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ನಗರ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಆಗಿ ಜವಾಬ್ದಾರಿ ನೀಡಲಾಗಿತ್ತು.
ಈವರೆಗೆ ಉಡುಪಿ ಜಿಲ್ಲಾ ವಿಶೇಷ ದಳದ (DSB) ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಿಲೇಶ್ ಚೌಹಾಣ್ ಅವರನ್ನು ಈಗ ಅಧಿಕೃತವಾಗಿ ಉಡುಪಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ನೇಮಿಸಲಾಗಿದೆ.