ಉಡುಪಿ, ಜ. 04 (DaijiworldNews/TA): ವಿದುಷಿ ದೀಕ್ಷಾ ರಾಮಕೃಷ್ಣ ನಿರಂತರ 6 ಗಂಟೆ 13 ನಿಮಿಷ ಪುರಂದರ ದಾಸರ ಗೀತೆ ಹಾಡುತ್ತ ಅದಕ್ಕೆ ತಕ್ಕದಾಗಿ ನರ್ತಿಸುತ್ತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (ಜಿಬಿಒಡಬ್ಲ್ಯು) ದಾಖಲಿಸಿದ್ದಾರೆ.

ಹೆಜ್ಜೆಗೆಜ್ಜೆ ಫೌಂಡೇಶನ್ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜ.೦3ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎಷಿಯಾ ಹೆಡ್ ಡಾ.ಮನಿಶ್ ವಿಷ್ಟೋಯಿ ಪ್ರಮಾಣ ಪತ್ರ ವಿತರಿಸಿದರು.
ಧೀಕ್ಷಾ ಅವರು ಪುರಂದರ ದಾಸರ ಗೀತೆ ಗಾಯನದ ಜತೆಗೆ ನೃತ್ಯ ಮಾಡಿರುವುದು ವಿಶೇಷವಾದುದು ಎಂದರು. ಶಾಸಕ ಯಶ್ ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ, ಗುರುಗಳಾದ ರಾಘವೇಂದ್ರ ಆಚಾರ್ಯ, ವಿ. ಮಧೂರು ಪಿ. ಬಾಲಕೃಷ್ಣ ಕರ್ನಾಟಕ ಹೆಡ್ ಡಾ. ಭರತ್ ಕಾಮತ್, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ ಶುಭ ಹಾರೈಸಿದರು. ದೀಕ್ಷಾ ಅವರ ಪತಿ ಬಸವ ಟ್ರಸ್ಟ್ ನ ಡಾ. ಶರಣಬಸವ ಉಪಸ್ಥಿತರಿದ್ದರು. ಹೆಜ್ಜೆಗೆಜ್ಜೆ ನಿರ್ದೇಶಕಿ ಯಶ್ ರಾಮಕೃಷ್ಣ ಪ್ರಸ್ತಾವನೆಗೈದು, ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು.