ಬಂಟ್ವಾಳ, ಜ.03 (DaijiworldNews/TA): ವಿಟ್ಲ ಪೇಟೆಯಲ್ಲಿ ಬೆಂಕಿ ಆಕಸ್ಮಿಕದಿಂದ ಹಲವಾರು ಅಂಗಡಿ ಕಟ್ಟಡಗಳಿಗೆ ಹಾನಿಯಾರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಆವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.




ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು, ಸಂತ್ರಸ್ತರ ಜೊತೆ ಶಾಸಕರು ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಗನ್ನಾಥ್ ಸಾಲಿಯನ್, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಜಯಂತ ಪಿ, ಪ್ರಮುಖರಾದ ರವೀಶ ಶೆಟ್ಟಿ ಕರ್ಕಳ, ನಾಗೇಶ್ ಶೆಟ್ಟಿ, ಕೊಡಂಗಾಯಿ, ವಿಟ್ಲ ಪಟ್ಟಣ ಪಂಚಾಯಿತಿನ ಸದಸ್ಯರಾದ ಹರೀಶ್ ವಿಟ್ಲ, ರವಿಶಂಕರ್ ವಿಟ್ಲ, ಯಾದವ ಮಂಗಿಲ ಪದವು, ಶ್ರೀ ಎಲೆಕ್ಟ್ರಿಕಲ್ ಕಟ್ಟಡದ ಮಾಲಕ ಸಂತೋಷ್ ಪುಂಜ ಎಸ್ ಬಿ ಟೈಲರ್, ಪವಿತ್ರ ಪೂಂಜ ಮೊದಲಾದವರು ಉಪಸ್ಥಿತರಿದ್ದರು.