ಸುಳ್ಯ, ಜ.03 (DaijiworldNews/TA): CCRT ಸುಳ್ಯದಲ್ಲಿ ಶಿಕ್ಷಕ ಚಿನ್ನಪ್ಪ ಗೌಡರ ಮುಂದಾಳತ್ವದಲ್ಲಿ ಪರಿಣಾಮಕಾರಿಯಾಗಿ ತನ್ನ ಚಟುವಟಿಕೆ ನಿರ್ವಹಿಸುತ್ತಿದ್ದು ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಸಿ.ಸಿ.ಆರ್.ಟಿ.ಯ ಮೂಲ ಉದ್ದೇಶ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ ಹೇಳಿದರು.

CCRT ಬಳಗ ಸುಳ್ಯ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಝೇಂಕಾರ ಅಂತಾರಾಜ್ಯ ಸಂಗೀತ ಹಬ್ಬ ಸಾಂಪ್ರದಾಯಿಕ ಹಾಗೂ ನವೀನ ಸಂಗೀತ ವಾದ್ಯಗಳ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಮಾತನಾಡಿ, CCRT ಅಧ್ಯಕ್ಷ ಚಿನ್ನಪ್ಪ ಗೌಡರ ನಾಯಕತ್ವದಲ್ಲಿ ಪ್ರತಿ ವರ್ಷ ಸಾಂಸ್ಕೃತಿಕ ಹಬ್ಬವನ್ನು ನಡೆಸುತ್ತಿದ್ದಾರೆ.ಈ ಕೆಲಸ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಸಂಗೀತಗಳು ಮನಸ್ಸನ್ನು ಕೆರಳಿಸುತ್ತಿವೆ. ಸಂಗೀತಗಳು ಮನಸ್ಸನ್ನು ಕೆರಳಿಸುವ ಕೆಲಸ ಮಾಡಬಾರದು ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು ಎಂದರು. CCRT ಅಧ್ಯಕ್ಷ ಚಿನ್ನಪ್ಪ ಗೌಡ ಮಾತನಾಡಿ, ಸಾಂಪ್ರದಾಯಿಕ ಸಂಗೀತ ಉಪಕರಣ ಬಳಸಿಕೊಂಡು ಸಂಗೀತ ನುಡಿಸಲು ರಾಜ್ಯದ ವಿವಿಧ ಭಾಗಗಳ ಕಲಾವಿದರಿಗೆ ಅವಕಾಶ ಮಾಡಿಕೊಡಲು ಝೇಂಕಾರ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ.ಇದರ ಸದುಪಯೋಗ ಪಡೆದುಕೊಳ್ಳಿ.
ಈ ಹಿಂದೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸುಬ್ರಹ್ಮಣ್ಯೇಶ್ವರ ಪ್ರಥಮ ದರ್ಜೆ ಕಾಲೇಜು ಸುಬ್ರಹ್ಮಣ್ಯ ಇದರ ನಿವೃತ್ತ ಪ್ರಾಚಾರ್ಯರ ಮನಮಹೋನ ಮುಡೂರು, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ, ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರ ಸೋಮಶೇಖರ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಳದಿಂದ ಮುಖ್ಯ ರಸ್ತೆಯಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು.