ಉಡುಪಿ, ಡಿ. 23 (DaijiworldNews/AA): ಕ್ರಿಸ್ಮಸ್ ಸಂತೋಷವನ್ನು ಹೆಚ್ಚಿಸುವ ಸಲುವಾಗಿ ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್ ವತಿಯಿಂದ ಆಭರಣ ಜುವೆಲ್ಲರ್ಸ್ "ಗೋದಲಿ ಸಡಗರ" ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಂಟನೇ ಆವೃತ್ತಿಯ ಸ್ಪರ್ಧೆಯಲ್ಲಿ ಗುಂಪು ಮತ್ತು ವೈಯುಕ್ತಿಕ ವಿಭಾಗಗಳು ಇದ್ದು, ಸರ್ವರಿಗೂ ಭಾಗವಹಿಸಲು ಮುಕ್ತ ಅವಕಾಶ ಒದಗಿಸಲಾಗಿದೆ.


ಕ್ರಿಸ್ಮಸ್ನ ಅವಿಭಾಜ್ಯ ಭಾಗವಾಗಿರುವ ಗೋದಲಿ ನಿರ್ಮಾಣ ಪರಂಪರೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗೋದಲಿಯು ಯೇಸು ಕ್ರಿಸ್ತನ ಜನನವನ್ನು ಸಾರುತ್ತದೆ, ವಿಶ್ವದಾದ್ಯಂತ ಕುಟುಂಬಗಳು, ಚರ್ಚ್, ಸಂಘ-ಸಂಸ್ಥೆಗಳು ಹಾಗೂ ಯುವ ತಂಡಗಳು ಭಕ್ತಿ ಮತ್ತು ಸೃಜನಶೀಲತೆಯ ಸಂಯೋಜನೆಯೊಂದಿಗೆ ಗೋದಲಿಯನ್ನು ಸಿದ್ಧಪಡಿಸುತ್ತಾರೆ. ಮನೆಗಳಲ್ಲಿ ಸುಂದರವಾಗಿ ವಿನ್ಯಾಸಗೊಳಿಸಿದ ಗೋದಲಿಗಳನ್ನು ನಿರ್ಮಿಸಿದರೆ, ಚರ್ಚ್ ಹಾಗೂ ಸಮುದಾಯ ಕೇಂದ್ರಗಳಲ್ಲಿ ದೊಡ್ಡ ಮತ್ತು ವಿಶಿಷ್ಟ ಕ್ರಿಬ್ಗಳು ತಂಡದ ಸಹಕಾರ ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ.
ಈಗ ಎಂಟನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಗೋದಲಿ ಸಡಗರ ಸ್ಪರ್ಧೆಯು ಈ ಪಾರಂಪರಿಕ ಹಾಗೂ ಆಧ್ಯಾತ್ಮಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಿದೆ. ಭಾಗವಹಿಸುವವರು ತಮ್ಮ ಗೋದಲಿಯ ಫೋಟೋಗಳನ್ನು ಮಂಗಳವಾರ, ಡಿಸೆಂಬರ್ 30, 2025ರೊಳಗಾಗಿ ಒದಗಿಸಲಾದ ಅಧಿಕೃತ ಲಿಂಕ್ ಮೂಲಕ ಸಲ್ಲಿಸಬಹುದು.
ಎರಡೂ ವಿಭಾಗಗಳಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳು ಲಭ್ಯವಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಜೊತೆಗೆ ಪ್ರತಿ ವಿಭಾಗದಲ್ಲಿ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ಕಳೆದ ವರ್ಷಗಳಲ್ಲಿ ಈ ಸ್ಪರ್ಧೆ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದು, ಭಾಗವಹಿಸುವವರು ಕ್ರಿಸ್ಮಸ್ನ ನಿಜವಾದ ಸಂದೇಶವನ್ನು ಉಳಿಸಿಕೊಂಡು ತಮ್ಮ ಸೃಜನಶೀಲತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ನಿಯಮಗಳು ಮತ್ತು ಷರತ್ತುಗಳು:
1. ಗೋದಲಿ ರಚನೆಯಲ್ಲಿ ಸೃಜನಶೀಲತೆ, ಕ್ರಿಸ್ಮಸ್ ಸಂದೇಶಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ
2. ವಾಟರ್ಮಾರ್ಕ್ ಬಳಸಿರುವ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
3. ಛಾಯಾಚಿತ್ರಗಳು ಸ್ಪಷ್ಟವಾಗಿದ್ದು, 1920 x 1080 ಪಿಕ್ಸೆಲ್ಸ್ ಇರತಕ್ಕದ್ದು.
4. ಸ್ಪರ್ಧೆಯು ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಜರುಗಲಿದೆ.
5. ವೈಯಕ್ತಿಕ ವಿಭಾಗ (ಮನೆ ), ತಂಡ ವಿಭಾಗ ( ಚರ್ಚ್/ ಸಂಘ / ಸಂಸ್ಥೆ / ವಾಳೆ )
6. ಗರಿಷ್ಠ 4 ಛಾಯಾಚಿತ್ರಗಳನ್ನು (day+night) ಮತ್ತು 2 ನಿಮಿಷದ ರೀಲ್ಸ್ ಕಳುಹಿಸಬಹುದು.
7. ಗೋದಲಿಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ವ್ಯಕ್ತಿ/ ತಂಡದ ಒಂದು ಛಾಯಾಚಿತ್ರ ಇರತಕ್ಕದ್ದು.
8. ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
9. ಛಾಯಾಚಿತ್ರ ಮತ್ತು ರೀಲ್ಸ್ಗಳೊಂದಿಗೆ ಸ್ಪರ್ಧಿಯ ಹೆಸರು / ತಂಡದ ಹೆಸರು, ಊರಿನ ಹೆಸರು, ಸರಿಯಾದ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಿಗದಿತ ಲಿಂಕ್ ಮೂಲಕ ಕಳುಹಿಸತಕ್ಕದ್ದು.
10. ತೀರ್ಪುಗಾರರ ತೀರ್ಮಾನವೇ ಅಂತಿಮ.
11. 2025 ರ ಗೋದಲಿಯ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಎಡಿಟ್ ಮಾಡಿದ, ಕೃತಕ ಬುದ್ದಿಮತ್ತೆ ಬಳಸಿ ತಯಾರಿಸಿದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ
12. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ವೈಯಕ್ತಿಕ / ತಂಡ ವಿಭಾಗ (ಸದಸ್ಯರಿಗೆ), ಆಭರಣ ಜುವೆಲ್ಲರ್ಸ್ ಉಡುಪಿ ವತಿಯಿಂದ ಇ-ಗಿಫ್ಟ್ ವೋಚರ್ ಮತ್ತು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಜನವರಿ 10, 2026 ರ ಒಳಗೆ ಇ-ಮೈಲ್ ಮೂಲಕ ತಲುಪಿಸಲಾಗುವುದು.
ಕೊನೆಯ ದಿನಾಂಕ ಡಿಸೆಂಬರ್ 30, 2025
ವೈಯಕ್ತಿಕ ವಿಭಾಗ:
ಪ್ರಥಮ : 5,000 ರೂ. + ಫಲಕ + ಪ್ರಮಾಣಪತ್ರ
ದ್ವಿತೀಯ : 3,000 ರೂ. + ಫಲಕ + ಪ್ರಮಾಣಪತ್ರ
ತೃತೀಯ : 2,000 ರೂ. + ಫಲಕ + ಪ್ರಮಾಣಪತ್ರ
ತಂಡ ವಿಭಾಗ
ಪ್ರಥಮ : 7,000 ರೂ. + ಫಲಕ + ಪ್ರಮಾಣಪತ್ರ
ದ್ವಿತೀಯ : 5,000 ರೂ. + ಫಲಕ + ಪ್ರಮಾಣಪತ್ರ
ತೃತೀಯ : 4,000 ರೂ. + ಫಲಕ + ಪ್ರಮಾಣಪತ್ರ
ಪ್ರತೀ ವಿಭಾಗದಲ್ಲೂ 1,000 ರೂಪಾಯಿಯ 5 ಸಮಾಧಾನಕರ ಬಹುಮಾನಗಳು
ಸರ್ವರಿಗೂ ಮುಕ್ತ ಅವಕಾಶ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 73386 37690/ 82 /86, 99001 61556
ನೋಂದಾವಣೆಗಾಗಿ:
https://daijiworldudupi.com/crib25/