ಕಾಸರಗೋಡು, ಡಿ. 23(DaijiworldNews/TA): ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ವತಿಯಿಂದ ಕ್ರಿಸ್ಮಸ್ ರೋಡ್ ಶೋ ವಿವಿಧ ಕಡೆಗಳಲ್ಲಿ ನಡೆಯಿತು.ಇದರಂಗವಾಗಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ನೃತ್ಯ ವಿವಿಧ ಕಾರ್ಯಕ್ರಮ ,ನಾಸಿಕ್ ಬ್ಯಾಂಡ್ ನಡೆಯಿತು.

ಧರ್ಮಗುರು ಫಾದರ್ ವಿಶಾಲ್ ಮೊನೀಸ್ ನೇತೃತ್ವದ ಲ್ಲಿ ಪೈವಳಿಕೆ, ಜೋಡುಕಲ್ಲು, ಪಚ್ಚಂಬಳ ಹಾಗೂ ಕಯ್ಯಾರ್ ಜಂಕ್ಷನ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೈವಳಿಕೆ ಜಂಕ್ಷನ್ ನಿಂದ ಆರಂಭಗೊಂಡ ರೋಡ್ ಶೋದಲ್ಲಿ ವೈದ್ಯರಾದ ಡಾ.ರಾಜಾರಾಮ್ ಭಟ್ ಹಾಗೂ ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ ಹುಸೈನ್ ಮಾಸ್ಟರ್ ಉಪಸ್ಥಿತರಿದ್ದು, ಸಂದೇಶ ನೀಡಿದರು. ಜೋಡು ಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂಸಫುಲ್ ಖಾಝಿಮಿ ಹಾಗೂ ಮಂಜೇಶ್ವರ ಸರಕಾರಿ ಕಾಲೇಜಿನ ಪ್ರಾಂಶುಪಾಲ ಶಿವಶಂಕರ ಪಿ. ಉಪಸ್ಥಿತರಿದ್ದರು.
ಪಚ್ಚಂಬಳ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮಜೀದ್ ಪಚ್ಚಂಬಳ ಸಂದೇಶ ನೀಡಿದರು. ಕಯ್ಯಾರ್ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮತ್ತಡ್ಕ ದುರ್ಗಾ ಪರಮೇಶ್ವರಿ ಶಾಲೆಯ ಶಿಕ್ಷಕ ಸತೀಶ್ ಕುಮಾರ್ ಶೆಟ್ಟಿಹಾಗೂ ಬದ್ರು ಜುಮಾ ಮಸೀದಿಯ ಉಸ್ತಾದ್ ಅಬ್ದುಲ್ ಹಮೀದ್ ಲತೀಫಿ ಉಪಸ್ಥಿತರಿದ್ದು, ಸಂದೇಶ ನೀಡಿದರು.
ಕಾರ್ಯಕ್ರಮಗಳಲ್ಲಿ ಕಯ್ಯಾರ್ ಕ್ರಿಸ್ತ ರಾಜ ಇಗರ್ಜಿಯ ಧರ್ಮಗುರು ಫಾದರ್ ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ ಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ ಹಾಗೂ ಸಿಸ್ಟರ್ ರೀನಾ ಸೆರಾವೋ , ಸಿಸ್ಟರ್ ಆಶಾ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.