ಕಾಸರಗೋಡು, ಡಿ. 23(DaijiworldNews/TA): ಬೇಕಲ ಠಾಣಾ ವ್ಯಾಪ್ತಿಯ ಪಾಲಕುನ್ನು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾದ ಬಗ್ಗೆ ಬೇಕಲ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ತನಿಖೆ ಆರಂಭಿಸಿದ್ದಾರೆ.

ರಾತ್ರಿ ಎಂಟೂವರೆ ಸುಮಾರಿಗೆ ಕೋಟಿ ಕುಳಂ ರೈಲ್ವೆ ನಿಲ್ದಾಣದ ಸಮೀಪ ಹಳಿಯಲ್ಲಿ ಕಾಂಕ್ರೀಟ್ ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ. ರೈಲ್ವೆ ಯ ಅಗತ್ಯ ಕ್ಕಾಗಿ ತಂದಿರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್ ನ್ನು ಕಿಡಿಗೇಡಿಗಳು ರೈಲ್ವೆ ಹಳಿ ಮೇಲೆ ಇರಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ತಲಪಿದ ರೈಲ್ವೆ ಅಧಿಕಾರಿಗಳು ಸ್ಲ್ಯಾಬ್ ನ್ನು ತೆರವು ಗೊಳಿಸಿದರು.
ರೈಲ್ವೆ ನಿಲ್ದಾಣ ಸಮೀಪದ ಕ್ವಾಟರ್ಸ್ ನಲ್ಲಿ ವಾಸವಾಗಿರುವ ಪ್ರವೀಣ್ ಹಾಗೂ ಮುಹಮ್ಮದ್ ಶಾನಿದ್ ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಲ್ಯಾಬ್ ಪತ್ತೆಯಾಗುವ ಹದಿನೈದು ನಿಮಿಷದ ಮೊದಲು ಸರಕು ರೈಲು ಇದೆ ಹಳಿಯಲ್ಲಿ ಚಲಿಸಿತ್ತು. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.