ಮಂಗಳೂರು, ಡಿ. 17 (DaijiworldNews/TA): ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು ಇದರ ಅಡ್ಯಾರ್ ಶಾಖೆಯ ಸ್ಥಳಾಂತರಿತ ಹಾಗೂ ಗೃಹ ಸಮುಚ್ಛಯಗಳ ನೂತನ ಕಟ್ಟಡ ನಾಗುರಿ ಸೌಧದ ಲೋಕಾರ್ಪಣಾ ಸಮಾರಂಭ ಮಂಗಳೂರಿನ ಅಡ್ಯಾರ್ ನಲ್ಲಿ ನೆರವೇರಿತು.


ನೂತನ ನಾಗೂರಿ ಸೌಧದ ಲೋಕಾರ್ಪಣೆಯನ್ನು ಸಹಕಾರಿ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ನೆರವೇರಿಸಿದರು. ಈ ವೇಳೆ ಎಂಎಲ್ಸಿ ಐವನ್ ಡಿಸೋಜಾ ಅವರು ನೂತನ ಗೃಹ ಸಮುಚ್ಚಯಗಳ ಕಟ್ಟಡ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮನಪಾ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್, ಸಾಮಾಜಿಕ ಹೋರಾಟಗರ ಮುನೀರ್ ಕಾಟಿಪಳ್ಳ, ವಿರಾಂಜಯನೇಯ ದೇವಸ್ಥಾನದ ಅಧ್ಯಕ್ಷ ದಿವಾಕರ್ ನಾಯ್ಕ್ ಅಡ್ಯಾರ್, ಕೋಡಿಮಜಲು ಧಾರ್ಮಿಕ ಮುಖಂಡ ಪ್ರದೀಪ್ ಕುಮಾರ್ ಶೆಟ್ಟಿ, ಅಡ್ಯಾರ್ ವಲಯ ಗುರಿಕಾರರು ವಿನ್ಸೆಂಟ್ ಡಿಸೋಜಾ, ಸರ್ವಶಕ್ತಿ ಮಹಿಳಾ ಮಂಡಳ ಅಧ್ಯಕ್ಷೆ ತೇಜಾಕ್ಷಿ ಮೋಹನ್, ದ.ಕ ಬಸ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಆಡ್ಯಂತಾಯ, ಅಡ್ಯಾರ್ ಗಟ್ಟಿ ಯಜಮಾನ ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಾಯಿತ್ತು. ಬಳಿಕ ಆನಂದ್ ಶೆಟ್ಟಿ ಅಡ್ಯಾರ್ ಅವರನ್ನು ಕೂಡ ಅಭಿನಂದಿಸಲಾಯಿತು.