ಮಂಗಳೂರು, ಡಿ. 17 (DaijiworldNews/TA): ಕದ್ರಿ ಗ್ರಾಮದ ಕಂಚಿದೀಪಾಲೆ ಮರುಳು ಧೂಮಾವತಿ ಮತ್ತು ಪರಿವಾರ ದೈವಗಳು ಹಾಗೂ ಅಮೀನ್ ಕುಟುಂಬಿಕರ ಕಂಚಿದೀಪಾಲೆ ಮೂಲಸ್ಥಾನ ಸಹಯೋಗದಲ್ಲಿ ಜನವರಿ 14ರಂದು ಶ್ರೀ ಕದ್ರಿ ಕಂಚಿದೀಪಾಲೆ ದೈವಸ್ಥಾನದ ಮಹಾದ್ವಾರ ಉದ್ಘಾಟನಾ ಸಮಾರಂಭ ಮತ್ತು ಫೆ.21ರಂದು ಕಂಚಿದೀಪಾಲೆ ಮರುಳು ಧೂಮಾವತಿ ಮತ್ತು ಪರಿವಾರ ದೈವಗಳ ಕಂಚಿದೀಪಾಲೆ ನೇಮ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿ.17 ರಂದು ಕದ್ರಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭ ಅರ್ಚಕರಾದ ಕೃಷ್ಣ ಅಡಿಗ, ಕುಮಾರ್ ಭಟ್, ದೇವಸ್ಥಾನದ ಸರ್ವ ಕಮಿಟಿ ಸದಸ್ಯರು, ಕೆಳಗಿನ ಮನೆ ರಾಜೇಂದ್ರ ಪೂಜಾರಿ, ಪ್ರದೀಪ್ ಆಳ್ವ ಕದ್ರಿ,ಗಡಿ ಪ್ರಧಾನರು ದೋಣಿಜೇಗುತ್ತು ಪ್ರಮೋದ್ ಕುಮಾರ್ ರೈ, ಅಧ್ಯಕ್ಷ ರಾದ ಲೋಕನಾಥ ಅಮೀನ್, ಹಾಗೂ ರಾಜೇಶ್ ಅಮೀನ್, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.