ಮಂಗಳೂರು, ಡಿ. 11 (DaijiworldNews/TA): ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಾಹಿತಿ ತಂತ್ರಜ್ಞಾನ ಉದ್ಯಾನ (ಐಟಿ ಪಾರ್ಕ್)ದ ಕಾಮಗಾರಿಗೆ ಡಿ. 15ರಿಂದ ಬಿಡ್ ತೆರೆಯಲಾಗುತ್ತದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬಿಜೆಪಿಯ ಡಾ| ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನ ದೇರೆಬೈಲು (ಬ್ಲೂಬೆರಿ ಹಿಲ್ಸ್ ರಸ್ತೆ) ಗ್ರಾಮದ ಸರ್ವೇ ನಂ.129.1ಎ ಮತ್ತು 113/2ರಲ್ಲಿ 3.285 ಎಕರೆಯಲ್ಲಿ ಐಟಿ ಪಾರ್ಕ್ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಡಿ. 15ರಿಂದ ಬಿಡ್ ತೆರೆಯಲಾಗುವುದು ಎಂದರು.
ವಾಣಿಜ್ಯ ಕಚೇರಿ ಟೆಕ್ ಪಾರ್ಕ್ಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ವಿನ್ಯಾಸ, ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್ಒಟಿ)ಗಾಗಿ 30 ವರ್ಷಗಳ ಗುತ್ತಿಗೆ ನೀಡಿದ್ದು, ಹೆಚ್ಚುವರಿಯಾಗಿ 30 ವರ್ಷಗಳ ಕಾಲ ಗುತ್ತಿಗೆ ಅವಧಿ ವಿಸ್ತರಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.