ಮೂಡುಬಿದಿರೆ, ಡಿ. 11 (DaijiworldNews/TA): ಹೊರರಾಜ್ಯದಿಂದ ಸರಕು ಹೇರಿಕೊಂಡು ಬಂದ ಲಾರಿಯೊಂದು ಗೂಗಲ್ ಮ್ಯಾಪ್ ತೋರಿದ ದಾರಿಯನ್ನು ಅನುಸರಿಸುತ್ತ ತಪ್ಪು ದಾರಿ ಹಿಡಿದು ಕಡಂದಲೆಯತ್ತ ಬಂದು ಚಾಲಕನ ನಿಯಂತ್ರಣ ತಪ್ಪಿ ಗುಡ್ಡದ ಬುಡಕ್ಕೆ ಗುದ್ದಿದ ಘಟನೆ ಸಂಭವಿಸಿದೆ.

ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಯ ಇಳಿಜಾರು ಪ್ರದೇಶದ ತಿರುವಿನಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ, ಚಾಲಕನಿಗೆ ಹೊಸ ರಸ್ತೆಯಾಗಿರುವುದರಿಂದ ಗೊಂದಲವಾಗಿ ನಿಯಂತ್ರಣ ಕಳೆದುಕೊಂಡು ಇನ್ನೊಂದು ಬದಿಯ ಗೋಡೆಗೆ ಗುದ್ದಿದೆ.
ತಾನು ಮೂಡುಬಿದಿರೆಯ ಪೇಪರ್ ಮಿಲ್ ಕಡೆಗೆ ಸಾಗಬೇಕಾಗಿತ್ತು. ಆದರೆ, ಗೂಗಲ್ ಮ್ಯಾಪ್ ನೋಡುತ್ತ ತಪ್ಪು ದಾರಿಯಲ್ಲಿ ಬಂದು ಸಿಕ್ಕಿಹಾಕಿಕೊಂಡಿರುವೆ ಎಂದು ಚಾಲಕ ಮಾಹಿತಿ ನೀಡಿದ್ದಾನೆ.