ಉಳ್ಳಾಲ, ನ. 02 (DaijiworldNews/TA): ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫ್ಯಾನ್ಸಿ ಡ್ರೆಸ್ ಆನ್ಲೈನ್ ಸ್ಪರ್ಧೆ, ಶ್ರೀಕೃಷ್ಣ - ಜನ್ಮಾಷ್ಟಮಿ ಪ್ರಯುಕ್ತ ರಾಧಾಕೃಷ್ಣ ಫೊಟೋ ಸ್ಪರ್ಧೆ, ನವರಾತ್ರಿ ಪ್ರಯುಕ್ತ ಮಹಿಳೆಯರಿಗಾಗಿ 9 ದಿನ 9 ಬಣ್ಣದ ಸೀರೆ ಧರಿಸಿದ ನವವರ್ಣ ಫೊಟೋ ಸ್ಪರ್ಧೆಯಲ್ಲಿ ವಿಜೇತರಿಗೆ ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ನ ತೊಕ್ಕೊಟ್ಟುವಿನ ಕಲ್ಲಾಪು ಮಳಿಗೆಯಲ್ಲಿ ಶನಿವಾರ ಬಹುಮಾನ ವಿತರಣಾ ಸಮಾರಂಭ ನಡೆಯಿತು.



ಈ ವೇಳೆ ಮಾತನಾಡಿದ ನಟ ಭೋಜರಾಜ್ ವಾಮಂಜೂರು, ಐದು ಪ್ರತಿಷ್ಠಿತ ಮಳಿಗೆ ಹಾಗೂ ಮೂರು ನಿರ್ಮಾಣ ಘಟಕದ ಮೂಲಕ ಸಾವಿರಾರು ಸಿಬ್ಬಂದಿಗೆ ಅನ್ನದಾತರಾಗಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆ ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ನ ಮಾಲಕರು ಹಬ್ಬದ ಪ್ರಯುಕ್ತ ನಾನಾ ಸ್ಪರ್ಧೆ ಮೂಲಕ ನಾಡಿನ ಸಂಸ್ಕೃತಿಯನ್ನು ಸಾಂಸ್ಕೃತಿಕವಾಗಿ ಜೀವಂತ ವಿಡುವ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸ್ಪರ್ಧೆ ನಡೆಸುವುದು, ಬಹುಮಾನಿತರನ್ನು ಆಯ್ಕೆ ಮಾಡುವ ಸಾಹಸದ ಕೆಲಸವನ್ನು ಸಂಸ್ಥೆ ಯಶಸ್ವಿಯಾಗಿ ಮಾಡಿದೆ. ಉಳ್ಳಾಲ ಭಾಗದಲ್ಲಿ ವಿಕೆ ಫರ್ನಿಚರ್ ಮನೆಮಾತಾಗಿದೆ. ಉತ್ತರ ಕರ್ನಾಟಕದಿಂದ ಕಾಸರಗೋಡು ತನಕ ಆನ್ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಬಹುಮಾನದ ಜತೆ ಕಲಾವಿದರನ್ನೂ ಗುರುತಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. ಗುಣಮಟ್ಟದ ಮೂರು ಹಬ್ಬಗಳ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ಒಟ್ಟು 12 ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಭೋಜರಾಜ ವಾಮಂಜೂರು, ರೆಮೋನಾ ಇವೆಟ್ ಪಿರೇರಾ ಹಾಗೂ ಯಕ್ಷಗಾನ ಕಲಾವಿದೆ ಆಶ್ರಿಯಾ ಖಾನ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ದೇರಳಕಟ್ಟೆ ಅಯ್ಯಪ್ಪ ಆಡಳಿತ ಸ್ವಾಮಿ ದೇವಸ್ಥಾನದ ಮೊಕೇಸರ ಚಂದ್ರಹಾಸ ಅಡ್ಯಂತಾಯ, ಉದ್ಯಮಿ ಸಂದೇಶ್ ಶೆಟ್ಟಿ ಕೊಲ್ಕೆ, ಸಂಸ್ಥೆಯ ಚೇರ್ಮೆನ್ ವಿಠಲ್ ಕುಲಾಲ್, ವಿನುತ ವಿಠಲ ಕುಲಾಲ್ ಉಪಸ್ಥಿತರಿದ್ದರು. ಪತ್ರಕರ್ತ ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.