ಮಂಜೇಶ್ವರ, ಅ. 21 (DaijiworldNews/TA): ವರ್ಕಾಡಿ ಪಂಚಾಯತಿನ ಕೊಡ್ಲಮೊಗರು ಪಾತೂರು ಗ್ರಾಮದಲ್ಲಿ ಸಿ ಪಿ ಐ ಎಂ ಪಕ್ಷದ ಸಂಘಟನೆಗಾಗಿ ಹಗಲಿರುಳು ಎನ್ನದೆ ದುಡಿದು ತನ್ನ ಜೀವನವನ್ನೇ ಜನರ ಹಿತಕ್ಕಾಗಿ ಮುಡಿಪಾಗಿರಿಸಿ ಹಲವಾರು ವರ್ಷಗಳ ಕಾಲ ಲೋಕಲ್ ಕಮಿಟಿ ಕಾರ್ಯದರ್ಶಿಯಾಗಿದ್ದ ಕಾಂ. ಕೆ. ಪಕೀರ ಶೆಟ್ಟಿಗಾರ ರ ಸವಿ ನೆನಪಿಗಾಗಿ ಕೊಡ್ಲಮೊಗರು ಲೋಕಲ್ ಕಮಿಟಿಯವರು ಊರ ಪರವೂರ ದಾನಿಗಳ ಸಹಕಾರದಿಂದ ನಿರ್ಮಿಸಿದ ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೊಬರ್ -19 ರಂದು ನಡೆಯಿತು.

ಕಾಂ. ಕೆ . ಪಕೀರ ಶೆಟ್ಟಿ ಸ್ಮಾರಕ ಮಂದಿರವನ್ನು ಸಿ.ಪಿ. ಐ .ಎಂ ರಾಜ್ಯ ಕಾರ್ಯದರ್ಶಿಎಂ ಎಲ್ ಎ ಎಂ .ವಿ ಗೋವಿಂದ ಮಾಸ್ಟರ್ ರವರು ವಿಡಿಯೋ ಕಾಂಫೊರನ್ಸ್ ಮೂಲಕ ಉಪಸ್ಥಿತಿಯಲ್ಲಿ ಸಿ.ಪಿ. ಐ .ಎಂ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ ಎಲ್ ಎ ರಾಜಗೋಪಾಲ್ ಎಂ ಅವರು ಉದ್ಘಾಟಿಸಿದರು. ಸಿ ಪಿ ಐ ಎಂ ಸ್ಟೇಟ್ ಕಮೀಟಿ ಮೆಂಬರ್ ಅದ ಕೆ.ಪಿ ಸತೀಶ್ಚಂದ್ರನ್ ಧ್ವಜಾರೋಹಣ ಹಾಗೂ ಅಗಲಿದ ಹಿರಿಯ ಕಾರ್ಯಕರ್ತರ ಭಾವಚಿತ್ರವನ್ನು ಅನಾವರಣಗೊಳಿಸಿದರು.
ಸಿಪಿ ಐ ಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಜಯಾನಂದ ಸ್ಮೃತಿ ಮಂಟಪವನ್ನು ಉದ್ಘಾಟಿಸಿದರು. ಕಚೇರಿಗೆ ಒದಗಿಸಿದ ಪೀಠೋಪಕರಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ರವರು ಉದ್ಘಾಟನೆಯನ್ನು ನೆರವೇರಿಸಿದರು. ಸಿಪಿ ಐ ಎಂ ಏರಿಯಾ ಸೆಕ್ರೆಟರಿ ವಿವಿ ರಮೇಶ್ ಏಕೋ-ಗಾರ್ಡ್ ನ್ನು ಉದ್ಘಾಟಿಸಿದರು. ನೂತನ ಕಟ್ಟಡದ ಧ್ವನಿವರ್ಧಕ ವನ್ನು ಕರ್ನಾಟಕ ಸಿಪಿ ಐ ಎಂ ರಾಜ್ಯ ಸಮಿತಿ ಸದ್ಸ್ಯ ಸುನಿಲ್ ಕುಮಾರ್ ಬಜಾಲ್ ಉದ್ಘಾಟಿಸಿದರು.
ಪಕ್ಷಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಹಿತೈಷಿಗಳ ಸಹಾಯದೊಂದಿಗೆ ಕಾಂಬ್ರೀಡ್ ಕೆ. ಪಕೀರ ಶೆಟ್ಟಿಗಾರ ಅವರು ಅಂದು ಜಾಗವನ್ನು ಖರೀದಿಸಿದ್ದರು. ನಂತರ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವ್ಯವಿಧ್ಯ ಕಾರ್ಯಕ್ರಮ ನಡೆಯಿತು. ಸುಮಾರು 25 ರಷ್ಟು ಹಿರಿಯ ಸದಸ್ಯರಿಗೆ ಗೌ ರವಾರ್ಪಣೆ ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರಂತರ ಶ್ರಮದಾನ ಮಾಡಿದ ಸದಸ್ಯರನ್ನು ಅಭಿನಂದಿಸಲಾಯಿತು. ಸಿಪಿ ಐ ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಾಂ. ವಿವಿ ರಮೇಶನ್ ರವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.