ಮಂಗಳೂರು, ಅ. 21 (DaijiworldNews/TA): ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ , ದಕ್ಷಿಣ ಕನ್ನಡ ಜಿಲ್ಲೆ - ಉಡುಪಿ ಜಿಲ್ಲೆ, ಮಂಗಳೂರು ವಲಯದ ವತಿಯಿಂದ ರಜತ ಸಂಭ್ರಮ 2025-26 ಅಂಗವಾಗಿ ಲಲಿತಾ ಗೀತಾ ಅನಾಥಶ್ರಮದಲ್ಲಿ ಹಿರಿಯರ ಜೊತೆ ದೀಪಾವಳಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಬಿಕರ್ಣಕಟ್ಟೆಯ ಬಳಿಯ ಲಲಿತಾ ಗೀತಾ ಅನಾಥಶ್ರಮ ಸಂಸ್ಥೆಯು ಸುಮಾರು 4 ವರ್ಷಗಳಿಂದ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥೆಯಾದ ಗೀತಾ ಅವರು ಮೂರು ನಿರಾಶ್ರಿತರಿಂದ ಸರಿಪಳ್ಳ ಪರಿಸರದಲ್ಲಿ ಆರಂಭ ಮಾಡಿದ ಈ ಅನಾಥಶ್ರಮ, ಈಗ ನಾಲ್ಕನೇ ವರ್ಷ ನಡೆಯುತ್ತಿದೆ. ಅನಾಥಶ್ರಮದಲ್ಲಿ 40 ಹಿರಿಯರು ಆಶ್ರಯ ಪಡೆಯುತ್ತಿದ್ದು ಇದರಲ್ಲಿ 10 ಮಹಿಳೆಯರು ಹಾಗೂ 30 ಪುರುಷರು ಇದ್ದಾರೆ.
ಇವರೊಂದಿಗೆ ಸೌತ್ ಕೆನರಾ ಫೊಟೊಗ್ರಾಫರ್ ಅಸೋಸಿಯೇಷನ್ (ರಿ) ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ, ಮಂಗಳೂರು ವಲಯದಿಂದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಸೋಸಿಯೇಶನ್ ನ ರಜತ ಸಂಭ್ರಮದ ಅಂಗವಾಗಿ, ಪ್ರಶಾಂತ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಸಧಸ್ಯರ ಜೊತೆ ಸೇರಿ, ಲಲಿತಾ ಗೀತಾ ಅನಾಥಶ್ರಮಕ್ಕೆ ಬೇಟಿ ನೀಡಿ ದೀಪಾವಳಿ ಯ ಮೊದಲನೆ ದಿನದಂದು ಹಿರಿಯರ ಜೊತೆ ಸೇರಿ ಪಟಾಕಿ ಸಿಡಿಸಿ, ಸುಡುಮದ್ದು ಬಿಡುವುದರ ಜೊತೆಗೆ ಎಲ್ಲರೊಂದಿಗೆ ಬೆರೆತು ಸಂಭ್ರಮ ಆಚರಿಸಲಾಯಿತು, ವೃಧ್ದರಿಗೆ ಹಲವು ರೀತಿಯ ಆಟ ಆಡಿಸಲಾಯಿತು.
ಇವರೊಂದಿಗೆ ಬೆಸೆಂಟ್ ಇವಿನಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ಯಾಪ್ಟೀಸ್ ಸ್ಪೋರ್ಟ್ಸ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಸದಸ್ಯರು ಪಾಲ್ಗೊಂಡರು. ಮೂರು ಸಂಘದ ಅಧ್ಯಕ್ಷರು ಹಾಗು ಅನಾಥಶ್ರಮದ ಮುಖ್ಯಸ್ಥೆ ಜೊತೆ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಫೋಟೋಗ್ರಾಫರ್ ಸಂಘದಿಂದ ಅನಾಥಶ್ರಮಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಬೆಸೆಂಟ್ ಇವನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಬ್ಯಾಪ್ಟೀಸ್ ಸ್ಪೋರ್ಟ್ಸ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಬಂಡಕರ್ಸ್ ಸಹಕಾರ ನೀಡಿದರು. ಸಂಘದ ಸದಸ್ಯರಾದ ಜೋಹನ್ ಡಿಸೋಜ ಹಾಗೂ ಪ್ರೇಮಲತಾ ಫ್ಯಾಮಿಲಿ ವಾಕರನ್ನು , ವಾಕಿಂಗ್ ಸ್ಟಿಕ್ ನ್ನು ನಿಖಿಲ್ ಡಿಸೋಜ ನೀಡಿ ಸಹಕರಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್ ತಿಲಕ್, ಪ್ರಧಾನ ಕಾರ್ಯದರ್ಶಿ ನವೀನ್ ಬಂಗೇರ, ಕೋಶಾಧಿಕಾರಿ ನಿಖಿಲ್ ಡಿಸೋಜ, ಛಾಯ ಕಾರ್ಯದರ್ಶಿ ಸ್ವೀಟನ್ ಪಿಂಟೊ, ಗೌರವಧ್ಯಕ್ಷರು ಮಧು ಮಂಗಳೂರು, ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು , ವಲಯದ ಸದಸ್ಯರು ಉಪಸ್ಥಿತರಿದ್ದರು.