ಕುಂದಾಪುರ, ಅ. 21 (DaijiworldNews/TA): ರೋಟರಿ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿ ಕೊಂಡ ನಾನು ಮಾಣಿಗೋಪಾಲ ಆತ್ಮಕಥನ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಗಿ ಮಾತನಾಡಿ, ಮಾಣಿಗೋಪಾಲ್ ಒಬ್ಬ ಅಜಾತಶತ್ರು. ಅವರು ಯಾವುದೇ ಪಕ್ಷದಲ್ಲಿರಲಿ ಪಕ್ಷಾತೀತ ಸ್ನೇಹಪರತೆ ಹೊಂದಿರುವ ಅಪರೂಪದ ನಾಯಕ. ಯೌವನದಲ್ಲೇ ಶಾಸನಸಭೆಗೆ ಸ್ಪರ್ಧಿ ಸುವ ಅವಕಾಶ ಪಡೆದಿದ್ದ ಅವರಿಗೆ ಯೋಗ್ಯತೆ ಇತ್ತು ಆದರೆ ಯೋಗ ಇರಲಿಲ್ಲ ಎಂದು ಹೇಳಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 1992ರ ಆಸುಪಾಸಿನಲ್ಲಿ ಮೂರ್ತೆದಾರಿಕೆ ಕಿಚ್ಚು ಹಚ್ಚಿಸಿದ ಮಾಣಿ ಗೋಪಾಲ್ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ನಾಯಕ ಎಂದರು.
ಮಾಣಿ ಗೋಪಾಲ ಅವರ ಆತ್ಮಕಥನ ನಾನು ಮಾಣಿ ಗೋಪಾಲ ಪುಸ್ತಕವನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾಣಿಗೋಪಾಲ್ ಮತ್ತು ಗಿರಿಜಾ ಮಾಣಿ ಗೋಪಾಲ್ ದಂಪತಿಯನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ , ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕಸಾಪ ಸ್ಥಾಪಕಧ್ಯಕ್ಷ ಎ ಎಸ್.ಎನ್.ಹೆಬ್ಬಾರ್, ಮತ್ತಿತರರು ಉಪಸ್ಥಿತರಿದ್ದರು.