ಸುಳ್ಯ, ಸೆ. 18 (DaijiworldNews/TA): ಅರೆಭಾಷೆಯ ಸೊಗಡು, ಅದರ ಖುಷಿ ಬೇರೆ ಎಲ್ಲಿಯೂ ಸಿಗುವುದಿಲ್ಲ. ಅರೆಭಾಷೆ ಬಗೆಗಿನ ವಿಚಾರಗಳನ್ನು ತಿಳಿಸಲು ಇಂಥ ಕಾರ್ಯಕ್ರಮ ಪೂರಕವಾಗಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್ ಹೇಳಿದರು.

ಸುಳ್ಯದ ಸುಬ್ರಹ್ಮಣೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ, ಸ್ಪರ್ಧೆಗಳಿಗೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಅರೆ ಭಾಷೆ ಸಂಸ್ಕೃತಿ- ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಅವರಿಗೆ ನಮ್ಮ ಸಂಸ್ಕೃತಿ ಉಣ ಬಡಿಸಿದಾಗ ಅದು ಮುಂದಿನ ತಲೆಮಾರಿನವರೆಗೂ ನಿರಂತರವಾಗಿ ಸಾಗಲು ಪ್ರೇರ ಣೆಯಾಗುತ್ತದೆ ಎಂದರು.
ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಎ.ಎ.ತಿಲಕ್, ಸುಬ್ರ-ಹ್ಮಣೇಶ್ವರ ಪದವಿ ಪೂರ್ವ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲ, ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಅಕಾಡೆಮಿ ಸದಸ್ಯರಾದ ಕಾರ್ಯಪ್ಪ ಗೌಡ ಪಿ.ಎಸ್., ವಿನೋದ್ ಮೂಡಗದ್ದೆ, ಲತಾ ಪ್ರಸಾದ್ ಕುದ್ದಾಜೆ ಭಾಗವಹಿಸಿದ್ದರು.