ಉಳ್ಳಾಲ, ಸೆ. 18 (DaijiworldNews/TA): ಕೊಣಾಜೆಯ ಮುಲಾರ ಪೂರ್ಣಗಿರಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ(ರಿ.)ದಲ್ಲಿ 18 ದಿನಗಳ ಸಂಧ್ಯಾ ಭಜನೆ ಮಂಗಳೋತ್ಸವ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 28ರಿಂದ ಆರಂಭವಾಗಿದ್ದ ಸಂಧ್ಯಾ ದೀಪಾಷ್ಟಮಿ ಕಾರ್ಯಕ್ರಮವು ಸೆಪ್ಟೆಂಬರ್ 14ರಂದು ಸಂಪನ್ನಗೊಡಿತು.

ಸೆಪ್ಟೆಂಬರ್ 14ರ ಭಾನುವಾರ ಸಂಜೆ 6:30ಕ್ಕೆ ಹಣತೆ ದೀಪದ ಮಂಗಳೋತ್ಸವ ಮೂಲಕ ಪ್ರಾರಂಭವಾದ ಭಜನಾ ಸಂಕೀರ್ತನೆಯು ರಾತ್ರಿ ಚಂದ್ರೋದಯ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಮಾತೃ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.