ಕಾಸರಗೋಡು,ಸೆ. 17 (DaijiworldNews/AK): ಉಪ್ಪಳ ಸಮೀಪದ ಬಾಯಾರು ಎಂಬಲ್ಲಿ ಸ್ಕೂಟರ್ ಹಾಗೂ ವ್ಯಾನ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈವಳಿಕೆ ಕಳಾಯಿಯ ಮುಹಮ್ಮದ್ ಸಾದಿಕ್ ಮತ್ತು ಮುಹಮ್ಮದ್ ಮೊಯ್ದೀನ್ ಗಾಯಗೊಂಡವರು. ಪೈವಳಿಕೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಬೆಳಿಗ್ಗೆ 7.45 ರ ಸುಮಾರಿಗೆ ಬಾಯಾರು ಪೆಟ್ರೋಲ್ ಬಂಕ್ ಬಳಿಯ ರಸ್ತೆಯಲ್ಲಿ ಅಪಘಾತ ನಡೆದಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.