ಉಡುಪಿ, ಆ. 30 (DaijiworldNews/AK):ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಮೊದಲ ಬಾರಿಗೆ ತುಳುನಾಡಿನ ಸಂಪ್ರದಾಯ ಆಚರಣೆ ಆಚರಿಸುತ್ತಿದ್ದು ತುಳುನಾಡಿನ ಜನರು ಹೆಮ್ಮೆ ಪಡಬೇಕು ತುಳುನಾಡಿನ ಸಾಂಪ್ರದಾಯಕ್ಕೆ ಅದರದ್ದೆ ಆದ ಗೌರವವಿದೆ ಎಂದು ದಾಯ್ಜಿವರ್ಲ್ಡ್ ವಾಹಿನಿಯ ಸ್ಥಾಪಕ ವಾಲ್ಟರ್ ನಂದಳಿಕೆ ಹೇಳಿದರು.














































ಅವರು ಶನಿವಾರ ಉಡುಪಿಯ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಹಮ್ಮಿಕೊಳ್ಳಲಾದ ಟ್ರಿನಿಟಿದ ಗೌಜಿ ಗಮ್ಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಶಾಲೆಗೆ ಬರುವಾಗಲೇ ನಮ್ಮ ಗಮನಕ್ಕೆ ತಿಳಿಯುತ್ತದೆ ಈ ಶಾಲೆಯಲ್ಲಿ ತುಳುನಾಡಿನ ಆಚರಣೆ, ವಿಚಾರ, ಸಂಪ್ರದಾಯಗಳ ಪ್ರತೀಕ ಇಲ್ಲಿದೆ. ಆಹಾರ ಸಾಂಸ್ಕೃತಿಕ, ಕಲೆ, ಸಂಪ್ರದಾಯ ಆಚರಣೆ ಇವುಗಳು ತುಳುನಾಡಿನಲ್ಲಿದೆ. ತುಳು ಭಾಷೆಗೆ ಲಿಪಿ, ಕ್ಯಾಲೆಂಡರ್ ಇವೆಲ್ಲವೂ ಇದೆ. ಹಾಗಾಗಿ ತುಳು ನಾಡಿನ ಸಂಪ್ರದಾಯ,ಆಚರಣೆಗಳನ್ನು ತಪ್ಪಿಸುವುದಿಲ್ಲ ಎಂದು ಹೇಳಿದರು.
ಬಳಿಕ ಮಾತನಾಡಿದ ಫಾದರ್ ಡೊಮಿನಿಕ್ ಸುನೀಲ್ ಲೊಬೊ, ಉಳಿದ ಶಿಕ್ಷಕರ ಸಹಾಯದಿಂದ ಈ ನಮ್ಮ ಶಾಲೆಯ ಗೌಜಿಗಮ್ಮತ್ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಇವತ್ತು ವಿದ್ಯಾರ್ಥಿಗಳಿಗೆ ಸಂತೋಷದ ದಿನ ಕಾರ್ಯಕ್ರಮವನ್ನು ಆನಂದಿಸಿರಿ. ತುಳುನಾಡಿನ ಬಗ್ಗೆ ಮಹತ್ವವವನ್ನು ತಿ:ಳಿದುಕೊಳ್ಳಿರಿ ಎಂದು ಹೇಳಿದರು . ಇದೇ ಸಂದರ್ಭದಲ್ಲಿ ದಾಯ್ಜಿವರ್ಲ್ಡ್ ವಾಹಿನಿಯ ಸ್ಥಾಪಕರಾದ ವಾಲ್ಟರ್ ನಂದಳಿಕೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ತುಳುನಾಡಿನ ಆಟಿ ಕಳಂಜೆಯ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಿನಿಟಿ ಸ್ಕೂಲ್ ನ ವೈಸ್ ಪ್ರಿನಿಸಿಪಾಲ್ ಫಾದರ್ ಅಮರ್ ಲೊಬೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಿಯಾ ಪುಟಾರ್ಡೊ,ಕಾರ್ಯದರ್ಶಿ ದೀಪ್ತಿ ಸುವರ್ಣ, ಅಕಾಡೆಮಿ ಕೋ ಅರ್ಡಿನೇಟರ್ ಮಾಗ್ಡ ಲೂವಿಸ್, ಉಪಸ್ಥಿತರಿದ್ದರು.