ಮಂಗಳೂರು, ಆ. 30 (DaijiworldNews/AK):ಸಂಘನಿಕೇತನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ಶನಿವಾರ ಭೇಟಿ ನೀಡಲಾಯಿತು.










ಪರಸ್ಪರ ಹೂಗುಚ್ಛಗಳ ವಿನಿಮಯ ಹಾಗೂ ಕಾಣಿಕೆ ರೂಪದಲ್ಲಿ ತಂದಂತಹ ಹೂ , ಹಣ್ಣುಹಂಪಲು, ಸಮರ್ಪಣೆ ಮಾಡಲಾಯಿತು. ಈ ವೇಳೆ ಭರತನಾಟ್ಯದಲ್ಲಿ ಸಾಧನೆಗೈದ ಕುಮಾರಿ ರೆಮೊನಾ ಇವೆಟ್ ಪಿರೇರಾ ಅವರಿಗೆ ಸಮಿತಿಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಈ ವೇಳೆ ವೇದಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಡಾ. ಜೆಸಿಂತಾ ಗೊವಿಯಾಸ್, ಅರುಣ್ ರಾಜ್ ರೋಡ್ರಿಗಸ್, ಐಎಂಎ ಮಂಗಳೂರು ಅಧ್ಯಕ್ಷೆ ಡಾ. ಜೆನ್ನಿ ಮರಿಯಾ, ಡಾ. ಥೆರೆಸಾ ಲೀಡಿಯಾ ಮೆಂಡೊನ್ಸಾ, ಪ್ರೊ. ಸಂಧ್ಯಾ ಡಿ’ಸೋಜಾ, ನೋಟರಿ ಲ್ಯಾನಿ ಪಿಂಟೋ, ಅಡ್ವೊಕೇಟ್ ರೋಷ್ಮಾ ಡಿ’ಸೋಜಾ, ಪ್ರವೀಣ್ ತಾವ್ರೋ, ಮ್ಯಾಕ್ಸಿನ್ ಕ್ರಾಸ್ತಾ, ಡಾ. ಎಲ್ಲೀಸ್ ರಾಡ್ರಿಗಸ್, ನವೀನ್ ಫೆರ್ನಾಂಡಿಸ್, ಪಿ.ಎಸ್ ಪ್ರಕಾಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.