ಕಾಸರಗೋಡು, ಆ. 30 (DaijiworldNews/AA): ನಿಯಂತ್ರಣ ತಪ್ಪಿದ ಸ್ಕೂಟಿ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್ ಗೆ ಬಡಿದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕುಂಬಳೆ ಸಮೀಪದ ಮಾವಿನ ಕಟ್ಟೆ ಎಂಬಲ್ಲಿ ನಡೆದಿದೆ.

ಬಂದ್ಯೋಡು ಇಚ್ಲಂಗೋಡು ದಿನಾರ್ ನಗರದ ಯೂಸಫ್ (20) ಮೃತಪಟ್ಟ ವಿದ್ಯಾರ್ಥಿ.
ಯೂಸಫ್ ಶಿರಿಯ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾಗಿದ್ದನು. ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮ ಮುಗಿಸಿ ಸಹಪಾಠಿಯನ್ನು ಮೊಗ್ರಾಲ್ ನ ಮನೆಗೆ ತಲುಪಿಸಿ ಮರಳುತ್ತಿದ್ದಾಗ ಕುಂಬಳೆ ಮಾವಿನ ಕಟ್ಟೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ಯೂಸಫ್ ನನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.