ಸುಳ್ಯ, ಆ 29 (DaijiworldNews/TA): ಜಟ್ಟಿಪಳ್ಳದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಗವಾಗಿ ಆರಾಧಿಸಲ್ಪಟ್ಟ ಗಣೇಶನ ವೈಭವದ ಶೋಭಾಯಾತ್ರೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಬಳಿಕ ಕಾಂತಮಂಗಲ ಪಯಸ್ವಿನಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.

ಶೋಭಾಯಾತ್ರೆಗೆ ಕುಣಿತ ಭಜನೆ ವಿಶೇಷ ಮೆರುಗು ನೀಡಿತು. ಶೋಭಾಯಾತ್ರೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಗಣೇಶನ ಕ್ರಪೆಗೆ ಪಾತ್ರರಾದರು. ಮಳೆಯ ಆರ್ಭಟ ಜೋರಾಗಿ ಇದ್ದುದರಿಂದ ಗಣಪತಿಗೆ ಪ್ಲಾಸ್ಟಿಕ್ ಅಳವಡಿಸಿ ಶೋಭಾಯಾತ್ರೆ ಮಾಡಲಾಯಿತು.