ಮಂಗಳೂರು, ಆ 28 (DaijiworldNews/AK): ವಿಶ್ವದ ಮೊದಲ ಎಐ ಕಾರ್ಡ್ ಎಂಬ ಹೆಗ್ಗಳಿಕೆಯೊಂದಿಗೆ ಕೃತಕ ಬುದ್ಧಿಮತ್ತೆ ಶಿಕ್ಷಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಯತಿಕಾರ್ಪ್ ಸಂಸ್ಥೆಯು 125 ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಯ್ಕೆಯಾದವರಿಗೆ ವಾರ್ಷಿಕ ರೂ. 3 ಲಕ್ಷದಿಂದ ರೂ. 5 ಲಕ್ಷದ ವರೆಗೆ ಆಕರ್ಷಕ ವೇತನ ಪ್ಯಾಕೇಜ್ ಘೋಷಿಸಿದೆ.

ಸಂಸ್ಥೆಯು ತನ್ನ ಎಐ ಕಾರ್ಡ್ ಯೋಜನೆಯ ವಿಸ್ತರಣಾ ಭಾಗವಾಗಿ, ಈ ನೇಮಕ ಪ್ರಕ್ರೀಯೆ ಆರಂಭಿಸಿದೆ. ಈ ಹುದ್ದೆಗೆ ಎಂಬಿಎ ಅಥವಾ ಪದವೀದರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಅನುಭವಿಗಳು ಹಾಗೂ ಶಿಕ್ಷಣ ಈಗ ತಾನೆ ಮುಗಿಸಿದ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಇದು ಬ್ಯುಸ್ನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಯಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಡೀಲರ್ಶಿಪ್ ಹಾಗೂ ಏಜೆನ್ಸಿ ನೀಡಲಾಗಿದ್ದು, ತಾಲೂಕು ಮಟ್ಟದಲ್ಲಿ ನೇಮಕವಾಗಿರುವ ಎಕ್ಸಿಕ್ಯೂಟಿವ್ ನೇಮಕವಾಗಿರುತ್ತದೆ. ಇದರ ಮೇಲ್ವಿಚಾರಣೆ ಹಾಗೂ ಮಾರುಕಟ್ಟೆ ಸಮನ್ವಯ ಮಾಡುವ ಉದ್ದೇಶದಿಂದ ಈ ನೇಮಕ ಮಾಡಲಾಗುತ್ತಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರಿನಲ್ಲಿರುವ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಈ ಹುದ್ದೆಗಳಿಗೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅನುಭವಿಗಳು ಅಥವಾ ಹೊಸಬರು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಅವರಿಗೆ ಸೂಕ್ತ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತದೆ.
ಜವಾಬ್ದಾರಿಗಳು ಮತ್ತು ಕೌಶಲ್ಯಗಳು
ಈಗಾಗಲೇ ನೇಮಕವಾಗಿರುವ ತಾಲೂಕು ಮಟ್ಟದ ಪ್ರತಿನಿಧಿಗಳ ಮಾರಾಟ ತಂಡವನ್ನು ನಿರ್ವಹಿಸುವುದು, ರಿಪೋರ್ಟಿಂಗ್ ಮತ್ತು ತಂಡದ ಗುರಿಗಳನ್ನು ತಲುಪಲು ನಾಯಕತ್ವ ವಹಿಸುವುದು ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಹೆಚ್ಚಿನ ಮಾಹಿತಿಯು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯಇದೆ. https://yaticorp.com/business-development-executive-bde/ .
ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್ "Company' ವಿಭಾಗದಲ್ಲಿರುವ "Career' ಪುಟಕ್ಕೆ ಹೋದರೆ, `ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್' ಹುದ್ದೆಯ ವಿವರಗಳು ಲಭ್ಯವಿವೆ. ಅಲ್ಲಿ "Apply Now' ಬಟನ್ ಕ್ಲಿಕ್ ಮಾಡಿ, ತಮ್ಮ ಹೆಸರು, ಇಮೇಲ್, ದೂರವಾಣಿ ಸಂಖ್ಯೆ, ಪ್ರಸ್ತುತ ಸ್ಥಳ ಹಾಗೂ ರೆಸ್ಯೂಮ್ ಅನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.