ಮಂಗಳೂರು, ಆ. 27 (DaijiworldNews/AA): ಕುಲಶೇಖರ್ನ ವಕೀಲ ಸುನೀತ್ ಆರ್ ಡಿ'ಸಾ ಅವರು ದಕ್ಷಿಣ ಕನ್ನಡ (ದ.ಕ.) ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕುಲಶೇಖರ ಮೂಲದವರಾದ ಡಿ'ಸಾ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಕಾಲೇಜು ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ನಲ್ಲಿ ವಿವಿಧ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಸುನೀತ್ ಆರ್ ಡಿ'ಸಾ ಅವರು ಕಳೆದ 16 ವರ್ಷಗಳಿಂದ ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ನೊಂದಿಗೆ ಸಂಬಂಧ ಹೊಂದಿದ್ದಾರೆ. ಎನ್ಎಸ್ಯುಐ ರಾಜ್ಯ ಪ್ರತಿನಿಧಿ, ಯುವ ಕಾಂಗ್ರೆಸ್ ಮಂಗಳೂರು ನಗರ ದಕ್ಷಿಣದ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಎರಡು ಅವಧಿಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಚುನಾಯಿತ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಿ'ಸಾ ಅವರು ತಮ್ಮ ಶಾಲಾ ಶಿಕ್ಷಣ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಮಂಗಳೂರಿನ ಸೇಂಟ್ ಅಲೋಶಿಯಸ್ ಸಂಸ್ಥೆಗಳಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಅವರು ಸೇಂಟ್ ಜೋಸೆಫ್ ಕಾಲೇಜ್ (VTU) ನಿಂದ HRMನಲ್ಲಿ ಎಂಬಿಎ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಅವರುನೋಂದಾಯಿತ ವಕೀಲರಾಗಿದ್ದು, ಮಂಗಳೂರು ವಕೀಲರ ಸಂಘದ ಸದಸ್ಯರಾಗಿದ್ದಾರೆ.
ಕಳೆದ 16 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನಿಷ್ಠಾವಂತ ಸದಸ್ಯರಾಗಿರುವ ಡಿ'ಸಾ ಅವರನ್ನು ಎಐಸಿಸಿ ಸದಸ್ಯ ಮತ್ತು ನವದೆಹಲಿಯ ಕಾನೂನು ಘಟಕದ ರಾಷ್ಟ್ರೀಯ ಅಧ್ಯಕ್ಷ ರೂಪೇಶ್ ಎಸ್. ಭದೌರಿಯಾ ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಮತ್ತು ಕರ್ನಾಟಕ ಕಾನೂನು ಘಟಕದ ಅಧ್ಯಕ್ಷ ಶ್ರೀಧರ್ ಎಂ.ಎಂ. ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿದ್ದಾರೆ.