ಮಣಿಪಾಲ, ಆ. 22 (DaijiworldNews/AK):ದೇಶದ ಪ್ರತಿಷ್ಠಿತ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್ ಟು ಬಿ ಯುನಿವರ್ಸಿಟಿ ಆಗಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಶ್ರೀ ಸೋದೆ ವಾದಿರಾಜ ಮಠ ವಿದ್ಯಾಭ್ಯಾಸ ಸಂಸ್ಥೆ (ಎಸ್ ಎಸ್ ವಿ ಎಂ ಇ ಐ) ಜೊತೆ ಆಗಸ್ಟ್ 22, 2025 ರಂದು ಮಣಿಪಾಲ ಕ್ಯಾಂಪಸ್ನಲ್ಲಿ ಮಹತ್ವದ ಮೆಮೊರಾಂಡಂ ಆಫ್ ಅಂಡರ್ಸ್ಟ್ಯಾಂಡಿಂಗ್ ಅಥವಾ ಜ್ಞಾಪಕ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿತು. ಕರ್ನಾಟಕದ ಶಿಕ್ಷಣ ಪರಿಸರವನ್ನು ಬಲಪಡಿಸುವ ಹಾಗೂ ಸಹಯೋಗಿ ಶ್ರೇಷ್ಠತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ತಂತ್ರಯುತ ಒಪ್ಪಂದ ಒಂದು ಪ್ರಮುಖ ಹೆಜ್ಜೆಯಾಗಿದೆ.


ಈ ತಿಳುವಳಿಕೆ ಪತ್ರ ಸಹಿ ಸಮಾರಂಭಕ್ಕೆ ಎರಡೂ ಸಂಸ್ಥೆಗಳ ಗಣ್ಯರು ಹಾಜರಾಗಿ, ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಾಮರ್ಥ್ಯಗಳನ್ನು ವೃದ್ಧಿಸಲು ತಮ್ಮ ಸಂಸ್ಥೆಗೆ ಇರುವ ಸಾಮೂಹಿಕ ಬದ್ಧತೆಯನ್ನು ತೋರಿದರು. ಸೋದೆ ಶಿಕ್ಷಣ ಸಂಸ್ಥೆಯ ಪ್ರತಿನಿಧಿ ಮಂಡಳಿಯನ್ನು ಮಾಹೆಯ ಉನ್ನತ ಮಟ್ಟದ ನಾಯಕತ್ವವು ಆತ್ಮೀಯವಾಗಿ ಸ್ವಾಗತಿಸಿತು. ಇದರಿಂದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಿಶಾಲವಾದ ಶೈಕ್ಷಣಿಕ ಸಮುದಾಯಕ್ಕೆ ಲಾಭವಾಗುವ ಸಮಗ್ರ ಸಹಭಾಗಿತ್ವದ ಅಡಿಪಾಯ ಹಾಕಲಾಯಿತು.
ಶ್ರೀ ಸೋದೆ ವಾದಿರಾಜ ಮಠ ವಿದ್ಯಾಭ್ಯಾಸ ಸಂಸ್ಥೆ ಪ್ರತಿನಿಧಿಗಳ ತಂಡದ ನಾಯಕತ್ವವನ್ನುಉಡುಪಿ ಶ್ರೀ ಸೋದೆ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಗುಂಪಿನ ಸಿಇಒ ಡಾ. ರಾಧಾಕೃಷ್ಣ ಎಸ್. ಐಥಲ್ ನೇತೃತ್ವ ವಹಿಸಿದ್ದರು. ಅವರೊಂದಿಗೆ ಶ್ರೀ ರತ್ನಕುಮಾರ್ (ಕಾರ್ಯದರ್ಶಿ, ಶ್ರೀ ಸೋಡೇ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್, ಉಡುಪಿ), ಡಾ. ತಿರುಮಲೇಶ್ವರ ಭಟ್ (ಪ್ರಿನ್ಸಿಪಲ್, ಎಸ್ ಎಮ್ ವಿ ಐ ಟಿ ಎಂ ಬಂಟಕಲ್, ಉಡುಪಿ), ಡಾ. ರವೀಂದ್ರ ಜೆ. (ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು, ಎಸ್ ಎಮ್ ವಿ ಐ ಟಿ ಎಂ. ಬಂಟಕಲ್, ಉಡುಪಿ), ಡಾ. ಸುಧರ್ಷಣ ರಾವ್ (ಡೀನ್, ಐಕ್ಯೂ ಎಸಿ), ಮತ್ತು ಡಾ. ಸಚಿನ್ ಭಟ್ (ಡೀನ್, ಆರ್ & ಸಿ) ಉಪಸ್ಥಿತರಿದ್ದರು.
ಮಾಹೆ ಪ್ರತಿನಿಧಿ ಮಂಡಳಿಯನ್ನು ಡಾ. ಎಚ್. ಎಸ್. ಬಳ್ಳಾಲ್ (ಪ್ರೋ ಚಾನ್ಸಲರ್, ಮಾಹೆ ಮಣಿಪಾಲ), ಡಾ. ಪಿ. ಗಿರಿಧರ ಕಿನಿ (ರಿಜಿಸ್ಟ್ರಾರ್, ಮಾಹೆ ಮಣಿಪಾಲ), ಡಾ. ನಾ
ನರಾಯಣ ಸಭಾಹಿತ್ (ಪ್ರೋ ವೈಸ್ ಚಾನ್ಸಲರ್ – ಟೆಕ್ನಾಲಜಿ & ಸೈನ್ಸ್, ಮಾಹೆ ಮಣಿಪಾಲ), ಡಾ. ಹರೀಶ್ ಕುಮಾರ್ (ಡೈರೆಕ್ಟರ್ – ಕಾರ್ಪೊರೇಟ್ ರಿಲೇಷನ್ಸ್, ಮಾಹೆ ಮಣಿಪಾಲ), ಮತ್ತು ಶ್ರೀ ಭಾರತ್ ಕುಮಾರ್ (ಡೈರೆಕ್ಟರ್ – ಪಿಆರ್, ಮಾಹೆ ಮಣಿಪಾಲ) ಪ್ರತಿನಿಧಿಸಿದರು.
ಎರಡು ಸಂಸ್ಥೆಗಳ ಬಲಗಳನ್ನು ಸಂಯೋಜಿಸಿ ಶೈಕ್ಷಣಿಕ ಕ್ಷೇತ್ರದ ಪಾಠಕ್ರಮ ವಿತರಣೆ, ಸಂಶೋಧನಾ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಅವಕಾಶಗಳನ್ನು ವಿಸ್ತರಿಸಲು ಈ ಸಹಭಾಗಿತ್ವವು ರೂಪಿತವಾಗಿದೆ. ನವೀನತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪರಿವರ್ತಿಸುವ ಹಾದಿಯ ಮೇಲೆ ಎರಡು ಸಂಸ್ಥೆಗಳಿಗೆ ಇರುವ ನವೀನ ದೃಷ್ಟಿಕೋನವನ್ನು ಈ ಒಪ್ಪಂದ ಪ್ರತಿಬಿಂಬಿಸುತ್ತದೆ.
ಮಾಹೆಯ ಟೆಕ್ನಾಲಜಿ ಮತ್ತು ಸೈನ್ಸ್ ನ ಪ್ರೊವೈಸ್ ಚಾನ್ಸಲರ್ ಡಾ. ನರಾಯಣ ಸಭಾಹಿತ್, ಎರಡು ಸಂಸ್ಥೆಗಳ ಈ ತಿಳುವಳಿಕೆ ಪತ್ರದ ಸಹಿ ಯ ಕುರಿತು ಮಾತನಾಡಿ , ಪ
"ಎಸ್ ಎಸ್ ವಿ ಎಂ ಇ ಐ ಜೊತೆಗಿನ ಈ ಒಡಂಬಡಿಕೆಯು ಶ್ರೇಷ್ಠತೆ ಮತ್ತು ನವೀನತೆ ಮೌಲ್ಯಗಳನ್ನು ಹಂಚಿಕೊಳ್ಳುವ ಶೈಕ್ಷಣಿಕ ಸಂಸ್ಥೆಗಳ ನಡುವೆ ಉತ್ತಮ ಸಂಬಂಧಗಳನ್ನು ಸ್ಥಾಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾಗಿ, ನಾವು ಜ್ಞಾನ ವಿನಿಮಯ, ಸಂಶೋಧನಾ ಸಹಯೋಗ ಮತ್ತು ವಿದ್ಯಾರ್ಥಿ ಅಭಿವೃದ್ಧಿಗೆ ಅಪ್ರತಿಮ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ. ಇದರಿಂದ ಕರ್ನಾಟಕದಷ್ಟೇ ಅಲ್ಲದೆ, ಅದರ ಗಡಿಯಾಚಿಗಿನ ಸಂಸ್ಥೆಗಳೂ ಶೈಕ್ಷಣಿಕ ಪರಿಸರ ಲಾಭ ಪಡೆಯುತ್ತದೆ ಎಂದು ಹೇಳಿದರು.
ಮಾಹೆಯ ರಿಜಿಸ್ಟ್ರಾರ್,ಡಾ. ಪಿ. ಗಿರಿಧರ ಕಿಣಿ ಮಾತನಾಡಿ "ಈ ತಿಳುವಳಿಕೆ ಪತ್ರ ದ ಸಹಿ ಎರಡೂ ಸಂಸ್ಥೆಗಳಿಗೆ ಪರಿವರ್ತನಾತ್ಮಕ ಪ್ರಯಾಣದ ಆರಂಭವಾಗಿದೆ. ನಮ್ಮ ಸಹಯೋಗವು ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂಶೋಧನಾ ಉಪಕ್ರಮಗಳನ್ನು ಉತ್ತಮಗೊಳಿಸುವುದಷ್ಟೇ ಅಲ್ಲದೆ, ಭಾರತದೆಲ್ಲೆಡೆ ಮಾದರಿಯಾಗುವ ಶೈಕ್ಷಣಿಕ ಶ್ರೇಷ್ಠತೆಯ ಬಲವಾದ ಜಾಲವನ್ನು ನಿರ್ಮಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗಾಗಿ ಈ ಒಕ್ಕೂಟವು ಹೊಸ ಸಾಧ್ಯತೆಗಳನ್ನು ತೆರೆದಿಡುವುದಕ್ಕೆ ನಾವು ಹರ್ಷಿತರಾಗಿದ್ದೇವೆ ಎಂದು ಹೇಳಿದರು.
ಈ ತಿಳುವಳಿಕೆ ಪತ್ರವು ಹಲವು ಕ್ಷೇತ್ರಗಳಲ್ಲಿ ಸಮಗ್ರ ಸಹಯೋಗಕ್ಕೆ ದಾರಿತೋರುತ್ತದೆ. ಶೈಕ್ಷಣಿಕ ಕಾರ್ಯಕ್ರಮಗಳ ಅಭಿವೃದ್ಧಿ, ಅಧ್ಯಾಪಕ-ವಿದ್ಯಾರ್ಥಿ ವಿನಿಮಯ, ಸಂಯುಕ್ತ ಸಂಶೋಧನಾ ಯೋಜನೆಗಳು, ಸಂಪನ್ಮೂಲ ಹಂಚಿಕೆ ಮತ್ತು ವಿಭಿನ್ನ ವಿಭಾಗಗಳಲ್ಲಿನ ಜ್ಞಾನ ವರ್ಗಾವಣೆ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಅನ್ವಯಿತ ವಿಜ್ಞಾನಗಳ ಕ್ಷೇತ್ರದಲ್ಲಿ ಉಭಯ ಸಂಸ್ಥೆಗಳ ಮಹೋನ್ನತ ಸಾಧನೆಗಳನ್ನು ಪರಿಗಣಿಸಿದಾಗ, ಈ ಸಹಭಾಗಿತ್ವ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಈ ಒಕ್ಕೂಟವು ಮಾಹೆ ಮತ್ತು ಎಸ್ ಎಸ್ ವಿ ಎಂ ಇ ಐ ಸಂಸ್ಥೆಗಳ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ನವೀನತೆ ಮತ್ತು ವಿದ್ಯಾರ್ಥಿ ಯಶಸ್ಸಿನ ದಾರಿಯಲ್ಲಿ ಒಟ್ಟಾಗಿ ಮುನ್ನಡೆಸುತ್ತದೆ. ಭಾರತದೆಲ್ಲೆಡೆ ಶಿಕ್ಷಣ ಕ್ಷೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದರೊಂದಿಗೆ, ಜಾಗತಿಕ ಸವಾಲುಗಳನ್ನು ಎದುರಿಸಲು ಸಜ್ಜುಗೊಂಡ ಪದವೀಧರರನ್ನು ರೂಪಿಸುವ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.