ಬಂಟ್ವಾಳ, ಆ. 22 (DaijiworldNews/TA): ಅಪ್ರಾಪ್ತ ಬಾಲಕನ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ನೀಡಿದ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ. ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಅಬ್ದುಲ್ಲಾ ಯಾನೆ ಮೋನು ಯಾನೆ ಪಿಲಿಮೋನು ಎಂಬಾತ ಆರೋಪಿಯಾಗಿದ್ದು,ಈತನ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

ನೊಂದ ಬಾಲಕ ಕೂದಲು ಕಟ್ ಮಾಡುವುದಕ್ಕೆ ಸೆಲೂನ್ ಒಂದಕ್ಕೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಪಿಲಿ ಮೋನು ಬಾಲಕನನ್ನು ತನ್ನ ಸ್ಕೂಟರ್ ನಲ್ಲಿ ಬಲವಂತವಾಗಿ ಒಂದು ಕಡೆ ಕರೆದುಕೊಂಡುಕೊಂಡು ಹೋಗಿದ್ದಲ್ಲದೆ, ಬಳಿಕ ಅಲ್ಲಿ ಯಾರೂ ಇಲ್ಲದ ಕಾರಣ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ನೊಂದ ಬಾಲಕನ ತಾಯಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.