ಉಡುಪಿ, ಆ. 02 (DaijiworldNews/AK):ಮಣಿಪಾಲ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಒಂದು ಭಾಗವಾಗಿರುವ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಜ್ಞಾನ ವಿಚಾರ ಸಂಕಿರಣ ಸೈನ್ಸ್ ಬಿಯಾಂಡ್ ಬೌಂಡರಿ: ಇನ್ವೆನ್ಷನ್, ಡಿಸ್ಕವರಿ, ಇನೋವೇಷನ್ ಅಂಡ್ ಸೊಸೈಟಿ – ರಸಾಯನ್ 21” ಯಶಸ್ವಿಯಾಗಿ ಉದ್ಘಾಟನೆಗೊಂಡಿತು. ಮಾಹೆ ಮತ್ತು ಚಿರಂತನ ರಸಾಯನ್ ಸಂಸ್ಥೆ (ಸಿ ಆರ್ ಎಸ್) ಜಂಟಿಯಾಗಿ ಆಯೋಜಿಸಿದ ಈ ಎರಡು ದಿನಗಳ ಸಮ್ಮೇಳನವು 200ಕ್ಕೂ ಹೆಚ್ಚು ವಿಶ್ವಪ್ರಸಿದ್ಧ ವಿಜ್ಞಾನಿಗಳನ್ನು, ಸಂಶೋಧಕರನ್ನು ಮತ್ತು ಚಿಂತಕರನ್ನು ಸಂವಹನಾತ್ಮಕ ಸಂಶೋಧನೆಗಳ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕಲು ಒಟ್ಟಿಗೆ ಸೇರುವಂತೆ ಮಾಡಿತು.


ಮಾಹೆ ಕುಲಪತಿ ಲೆಫ್ಟನಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್, ವಿ ಎಸ್ ಎಮ್ (ನಿವೃತ್ತ), ವಿಚಾರ ಸಂಕಿರಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಸಮಾರಂಭದಲ್ಲಿ ಐಸಿಟಿ ಮುಂಬಯಿ ಕುಲಾಧಿಪತಿ ಪ್ರೊ. ಜೆ.ಬಿ. ಜೋಶಿ, ಬಿ ಐ ಟಿ ಎಸ್ ಪಿಲಾನಿಯ ಕುಲಪತಿ ಪ್ರೊ. ರಾಮ್ಗೋಪಾಲ್ ರಾವ್, ಥಾಯ್ಲ್ಯಾಂಡ್ ಕೆಮಿಕಲ್ ಸೊಸೈಟಿಯ ಅಧ್ಯಕ್ಷ ಪ್ರೊ. ವುಧಿಚೈ ಪರಸುಕ್, ಮಣಿಪಾಲ್ ಅಪ್ಲೈಡ್ ಫಿಸಿಕ್ಸ್ ಇನ್ಸ್ಟಿಟ್ಯೂಟ್ನ ನಿರ್ದೇಶಕರೂ ಹಾಗೂ ಸಂಯೋಜಕರೂ ಆಗಿರುವ ಪ್ರೊ. ಸಾಜನ್ ಡಿ. ಜಾರ್ಜ್, ಸಿ ಆರ್ ಎಸ್ ಕಾರ್ಯದರ್ಶಿ ಪ್ರೊ. ಸಿ.ವಿ. ಯೆಲಮಗ್ಗಡ, ಹಾಗೂ ಸಿ ಆರ್ ಎಸ್ ಅಧ್ಯಕ್ಷ ಪ್ರೊ. ಬ್ರಜ ಗೋಪಾಲ್ ಬಾಗ್ ಮೊದಲಾದವರು ಉಪಸ್ಥಿತರಿದ್ದರು.
ಭಾರತ ಸರ್ಕಾರದ ಪ್ರಮುಖ ವಿಜ್ಞಾನ ಸಲಹೆಗಾರರಾದ ಪ್ರೊ. ಅಜಯ್ ಕುಮಾರ್ ಸೂದ್ ಅವರ ವಿಶೇಷ ಬೆಂಬಲ ಸಂದೇಶವನ್ನು ಸ್ವೀಕರಿಸಲಾಯಿತು. ಅವರು “ವಿಜ್ಞಾನವು ಗಡಿಗಳನ್ನು ಮೀರಿದಾಗ ಅಭಿವೃದ್ಧಿ ಹೊಂದುತ್ತದೆ. ಅಲ್ಲಿ ಆವಿಷ್ಕಾರವು ಸಾಧ್ಯತೆಯನ್ನು ಪರಿವರ್ತಿಸುತ್ತದೆ, ಅನ್ವೇಷಣೆಯು ಜ್ಞಾನವನ್ನು ವಿಸ್ತರಿಸುತ್ತದೆ ಮತ್ತು ನಾವಿನ್ಯತೆಯ ಆವಿಷ್ಕಾರವು ಪ್ರಗತಿಗೆ ಉತ್ತೇಜನ ನೀಡುತ್ತದೆ” ಇಂದು ಹೇಳಿದರು. ಅವರು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಲು ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ, ಆವಿಷ್ಕಾರ ಮತ್ತು ಸಂಶೋಧನೆ (ಎಸ್ ಟಿ ಐ ಆರ್) ನ್ನು ಏಕೀಕೃತವಾಗಿ ಬಳಸುವ ನಿಟ್ಟಿನಲ್ಲಿ ರೂಪಿಸಲಾದ ರಾಷ್ಟ್ರಮಟ್ಟದ ಮಾರ್ಗನಕ್ಷೆಯನ್ನು ಪುನರುಚ್ಚರಿಸಿದರು.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ಇಂಟರ್ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಪ್ಲೈಡ್ ಕೆಮಿಸ್ಟ್ರಿ (ಐಯು ಪಿ ಎ ಸಿ) ಅಧ್ಯಕ್ಷರಾದ ಪ್ರೊ. ಏಹುಡ್ ಕೀನನ್ ರವರು ದೂರವಾಣಿ ಮೂಲಕ ಮಾತನಾಡಿದರು. ಅವರು ಸಭಿಕರಿಗೆ ವೈಜ್ಞಾನಿಕ ಸಂಶೋಧನೆಗಳು ಶಿಸ್ತಿನ ಮತ್ತು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಕಾರ್ಯನಿರ್ವಹಿಸಿದಾಗ ಉಂಟಾಗುವ ಪರಿವರ್ತನಾ ಸಾಮರ್ಥ್ಯದ ಕುರಿತು ಬೆಳಕು ಚೆಲ್ಲಿದರು.
ಈ ಸಮ್ಮೇಳನವು ಶ್ರೇಷ್ಠ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳುವ ಉತ್ಕೃಷ್ಟ ವೇದಿಕೆಯಾಗಿದ್ದು, ಶಾಸ್ತ್ರೀಯ ಅಂಕಣಗಳ ಪಾರಮ್ಯವನ್ನು ಮೀರಿ ಜಾಗತಿಕ ಸಮಸ್ಯೆಗಳಾದ ಹವಾಮಾನ ಮತ್ತು ಶಕ್ತಿಯಿಂದ ತೊಡಗಿ ಆಹಾರ ಆರೋಗ್ಯ ಮತ್ತು ಸುಸ್ಥಿರ ತಂತ್ರಜ್ಞಾನಗಳಿಗೆ ಪರಿಹಾರ ನೀಡುವ ಗುರಿಯೊಂದಿಗೆ ವಿಜ್ಞಾನಿಗಳು, ಆವಿಷ್ಕಾರಕಾರರು, ಉದ್ಯಮದ ತಜ್ಞರು ಹಾಗೂ ನೀತಿ ನಿರ್ಮಾಣಕರ ನಡುವೆ ಸಹಯೋಗವನ್ನು ಬೆಂಬಲಿಸುವಲ್ಲಿ ಸಹಾಯ ಮಾಡಿತು.
ಸಿ ಆರ್ ಎಸ್ ಪ್ರಶಸ್ತಿ ಪ್ರದಾನ
ರಸಾಯನ್ 21 ಸಮ್ಮೇಳನದ ಪ್ರಮುಖ ಭಾಗವೆಂದರೆ ಸಿ ಆರ್ ಎಸ್ ಪ್ರಶಸ್ತಿ ಪ್ರದಾನ ಸಮಾರಂಭ. ಈ ಸಂದರ್ಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳು, ಆರ್ & ಡಿ ಸಂಸ್ಥೆಗಳು ಮತ್ತು ಉದ್ಯಮಗಳಿಂದ 36 ವಿಜ್ಞಾನಿಗಳನ್ನು ಗೌರವಿಸಲಾಯಿತು. ಪ್ರೊ. ಜೆ.ಬಿ. ಜೋಶಿಗೆ ಟಿ
ಸಿ ಆರ್ ಎಸ್ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ ಮತ್ತು ಪ್ರೊ. ರಾಮ್ಗೋಪಾಲ್ ರಾವ್ ಅವರಿಗೆ ಸಿ ಆರ್ ಎಸ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನಿಸಲಾಯಿತು.
MAHE ಕುಲಪತಿಯಾದ ಲೆಫ್ಟ. ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು ವಿಚಾರ ಸಂಕಿರಣದ ಮಹತ್ವವನ್ನು ಉದ್ದೇಶಿಸಿ ಮಾತನಾಡಿ“ರಸಾಯನ್ 21 ಶೈಕ್ಷಣಿಕ ಮತ್ತು ಉದ್ಯಮಕ್ಕೆ ಸೇತುವೆಯಾಗುವ ನಾವಿನ್ಯತೆ ಪರಿಸರ ವ್ಯವಸ್ಥೆಗಳನ್ನು ಬೆಳೆಸುವ ನಮ್ಮ ಭದ್ರತೆಯನ್ನು ಸಾಕಾರ ಗೊಳಿಸುತ್ತದೆ. ಈ ವಿಚಾರ ಸಂಕಿರಣವು ಸಂಶೋಧನೆಯ ನೈಜ ಪ್ರಪಂಚದ ಪರಿಣಾಮಕಾರಿ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು, ವಿಜ್ಞಾನ ಹೇಗೆ ಮತ್ತು ಎಲ್ಲಿ ಬಳಸಲ್ಪಡುತ್ತದೆ ಎಂಬುದರ ಮೇಲೆ ಅದು ಸಮಾಜಕ್ಕೆ ನೀಡುವ ಕೊಡುಗೆಗಳು ಹಾಗೂ ಮಾನವೀಯತೆಯಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲು ಪರಿವರ್ತಕ ಶಕ್ತಿಯಾಗಿ ಬದಲಾಗಲು ಸಹಾಯ ಮಾಡುತ್ತದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ರಸಾಯನಶಾಸ್ತ್ರ, ವಸ್ತುಶಾಸ್ತ್ರ, ಪರಿಸರ ಸುಸ್ಥಿರತೆ, ತಂತ್ರಜ್ಞಾನ, ವೈದ್ಯಕೀಯ ಅನ್ವಯಿಕೆ, ಕೃತಕ ಬುದ್ಧಿಮತ್ತೆ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳ ಬಗ್ಗೆ ಪ್ರಮುಖ ವಿಚಾರ ಸಂಕಿರಣ ಮತ್ತು ಚರ್ಚೆಗಳು ನಡೆಯುತ್ತವೆ. ಎರಡನೇ ದಿನದಲ್ಲಿ “ಸಮಾಜಕ್ಕಾಗಿ ಸಂಶೋಧನೆ: ಭಾರತೀಯ ಮತ್ತು ಜಾಗತಿಕ ಸನ್ನಿವೇಶದಲ್ಲಿ ಸವಾಲುಗಳು ಮತ್ತು ಅವಕಾಶಗಳು” ಎಂಬ ವಿಚಾರದಲ್ಲಿ ದುಂಡು ಮೇಜಿನ ಚರ್ಚೆ ನಡೆಯಲಿದೆ.
ಈ ಸಮ್ಮೇಳನವು ಮಾಹೆ ಸಂಸ್ಥೆಗೆ ತನ್ನ ಶ್ರೇಷ್ಠ ಸಂಶೋಧನೆಗಳನ್ನು ಬಿಂಬಿಸುವ ಮಹತ್ವದ ಹೆಜ್ಜೆಯಾಗಿ, ಅಂತರಾಷ್ಟ್ರೀಯ ಸಹಯೋಗವನ್ನು ಸದೃಢಗೊಳಿಸಿ ಸಮಾಜಮುಖಿ ವಿಜ್ಞಾನವನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.