ಬಂಟ್ವಾಳ, ಜು. 15(DaijiworldNews/TA): ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ ಕಲಾವಿದ, ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ ಮಾಣಿ(44) ಇವರು ಮಂಗಳವಾರ ಮುಂಜಾನೆ ತಮ್ಮನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಚಿನ್ನದ ಕೆಲಸ ಮಾಡುತ್ತಿದ್ದ ಇವರು ಜೊತೆಗೆ ಮನೆ ಸಮೀಪವೇ ಚಿಕ್ಕ ದಿನಸಿ ಅಂಗಡಿ ನಡೆಸುತ್ತಿದ್ದರು. ಹಾಸ್ಯಪ್ರಜ್ಞೆ ಉಳ್ಳವರಾಗಿದ್ದ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿದ್ದರು. ಕಲಾಮಾತೆ ನಾಗನವಳಚ್ಚಿಲ್ ತಂಡದ ಕಲಾವಿದರಾಗಿದ್ದು, ಶಾಂತರಾಮ್ ಕಲ್ಲಡ್ಕ ನಿರ್ದೇಶನದ ತುಳು ಅಪ್ಪೆಜೋಕ್ಲು ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.
ಪ್ರಸ್ತುತ ನಮ್ಮ ಕಲಾವಿದರು ನೆಲ್ಯಾಡಿ ತುಳು ನಾಟಕ ತಂಡದ ಕಲಾವಿದರಾಗಿದ್ದ ಇವರು, ಯುವ ಕಲಾವಿದ ಸಚಿನ್ ಮಾಣಿ ಯವರ ಹಲವು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದವರು. ಸ್ನೇಹಜೀವಿಯಾಗಿದ್ದ ಇವರ ಅಗಲಿಕೆ ಗ್ರಾಮದಲ್ಲಿ ಆಘಾತಕ್ಕೆ ಕಾರಣವಾಗಿದೆ. ಮೃತರು ತಾಯಿ, ಸಹೋದರ, ಪತ್ನಿ, ಪುಟ್ಟಮಗಳು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.