ಸುಳ್ಯ, ಜು. 15(DaijiworldNews/TA): ಅರಂತೋಡು, ತೊಡಿಕಾನ, ಪೆರಾಜೆ ಆಸುಪಾಸಿನಲ್ಲಿದ್ದು, ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಆನೆಯನ್ನು ಕಾಡಿಗಟ್ಟುವ ಪ್ರಕ್ರಿಯೆ ಇಂದು ಆರಂಭವಾಗಿದೆ.

ಈ ಕಾರ್ಯಕ್ಕಾಗಿಯೇ ಭಾಗಮಂಡಲದಲ್ಲಿರುವ ಕೊಡಗು ವಿಭಾಗ ಎಲಿಫೆಂಟ್ ಟಾಸ್ಕ್ ಫೋರ್ಸ್ ಸುಳ್ಯಕ್ಕೆ ಬಂದಿದ್ದು, ಸುಳ್ಯ ರೇಂಜರ್ ಮಂಜುನಾಥ್ ರವರು ಹಾಗೂ ಇಲಾಖಾ ಸಿಬ್ಬಂದಿಯವರಿದ್ದು, ಟಾಸ್ಕ್ ಫೋರ್ಸ್ ನವರು ಆನೆ ಎಲ್ಲಿದೆಯೆಂದು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ.
ಪೆರಾಜೆ ಗ್ರಾಮದ ಖಾಸಗಿ ಜಾಗವೊಂದರಲ್ಲಿ ಆನೆ ಇದ್ದು, ಅದನ್ನು ಜುಲೈ 15ರಂದು ಕಾರ್ಯಾಚರಣೆ ನಡೆಸಿ, ಕೋಳಿಕ್ಕಮಲೆ ಕಡೆಯ ಅರಣ್ಯಕ್ಕೆ ಅಟ್ಟಲಾಗುವುದೆಂದು ತಿಳಿದುಬಂದಿದೆ.