ಬಂಟ್ವಾಳ,ಜು. 14 (DaijiworldNews/AK): ಕೆಂಪುಕಲ್ಲು ಕಲ್ಲಿನ ರಾಜಧನವನ್ನು 40 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿರುವ ರಾಜ್ಯ ಸರಕಾರವು ಮರಳು ತೆಗೆಯುವ ಕಾನೂನನ್ನೂ ಸರಳಗೊಳಿಸದೆ, ಜನಸಾಮಾನ್ಯರು ಅಡ್ಡದಾರಿಯಲ್ಲಿ ಸಾಗಲು ಪ್ರೇರಣೆ ನೀಡುತ್ತಿದೆ. ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.







ಅವರು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ.ರೋಡಿನಲ್ಲಿ ಕೆಂಪುಕಲ್ಲು ಹಾಗೂ ಮರಳಿನ ಅಭಾವಕ್ಕೆ ಕಾರಣವಾದ ರಾಜ್ಯ ಸರಕಾರದ ವಿರುದ್ಧ ಸೋಮವಾರ ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಕಾರ್ಮಿಕರಿಗೆ ಕೆಲಸ ಇಲ್ಲದೇ ಇದ್ದಾಗ ಅದು ಜಿಲ್ಲೆಯ ಕಾನೂನು ಸುವ್ಯವಸ್ಥೆಗೂ ತೊಂದರೆಯಾಗುವ ಆತಂಕವಿರುತ್ತದೆ. ಜಿಲ್ಲೆಯ ಗಣಿ ಇಲಾಖೆಗೆ ಸರಿಯಾದ ಅಧಿಕಾರಿಗಳನ್ನು ನೇಮಿಸುವುದು ಕೂಡ ಸರಕಾರದಿಂದ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮಾತನಾಡಿ, ಸರ್ಕಾರದ ದುರಾಡಳಿತದಿಂದಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.
ಬಂಟ್ವಾಳ ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಮಾತನಾಡಿ,ಪ್ರಜೆಗಳು ಸರ್ಕಾರ ನಡೆಸಲು ಕಾಂಗ್ರೇಸ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಆದರೆ ಈ ಸರ್ಕಾರ ಜನರನ್ನು ಬದುಕಲಿಕ್ಕೆ ಬಿಡ್ತಾ ಇಲ್ಲ. ಬಿಜೆಪಿ ಆಡಳಿತದಲ್ಲಿ ಎಲ್ಲರಿಗೂ ಸಿಗುತ್ತಿದ್ದ ಮರಳು ಇಂದು ಇಂದು ಕಾಳಸಂತೆಯಲ್ಲಿ ಮಾತ್ರ ಮಾರಾಟವಾಗ್ತಾ ಇದೆ ಎಂದರು. ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ, ಭಷ್ಟಾಚಾರ ನಡೆಸುತ್ತಿರುವ ರಾಜ್ಯಸರ್ಕಾರವೇ ಹಫ್ತಾ ವಸೂಲಿಗೆ ಇಳಿದಿದೆ ಇದರಿಂದ .ಜನಸಮಾನ್ಯರಿಗೆ ಮರಳು ಸಿಗ್ತಾ ಇಲ್ಲ. ಸರ್ಕಾರ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಮಾಡುವಂತೆ ವಿಕಾಸ್ ಪುತ್ತೂರು ಒತ್ತಾಯಿಸಿದರು.
ಬಿಜೆಪಿ ಮುಖಂಡೆ ಸುಲೋಚನಾ ಜಿ.ಕೆ.ಭಟ್ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ದ.ಕ.ಜಿಲ್ಲಾಡಳಿತ ಬಡಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ, ಈ ಪರಿಸ್ಥಿತಿ ಹೀಗೆ ಮುಂದುವರಿದರೆ, ರೈತರ ಆತ್ಮಹತ್ಯೆ ರೀತಿಯಲ್ಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಇದೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಮಾಜಿ ಸದಸ್ಯರಾದ ರವೀಂದ್ರ ಕಂಬಳಿ. ಕಮಲಾಕ್ಷಿ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮೂರು, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್, ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ದಿನೇಶ್ ಅಮ್ಮೂರು, ಪುರುಷೋತ್ತಮ ಶೆಟ್ಟಿ, ಯಶೋಧರ ಕರ್ಬೆಟ್ಟು, ಹರಿಪ್ರಸಾದ್ ಭಂಡಾರಿಬೆಟ್ಟು, ಕಮಲಾಕ್ಷಿ ಪೂಜಾರಿ, ಲಖಿತಾ ಆರ್ ಶೆಟ್ಟಿ, ಸಂಪತ್ ಕಡೇಶ್ವಾಲ್ಯ, ಪುರುಷೋತ್ತಮ ಸಾಲ್ಯಾನ್, ಮೋನಪ್ಪ ದೇವಸ್ಯ, ಪ್ರಭಾಕರ ಪ್ರಭು, ಜನಾರ್ದನ ಬೊಂಡಾಲ, ವಸಂತ ಅಣ್ಣಳಿಕೆ, ಸನತ್ಕುಮಾರ್ ರೈ ಮೊದಲಾದವರಿದ್ದರು.