ಬಂಟ್ವಾಳ, ಜು. 14 (DaijiworldNews/AK): ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ 5೦೦ ಕೋಟಿ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.



ಮಾಜಿ ಸಚಿವ ಬಿ.ರಮಾನಾಥ ರೈ, ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಸಮಿತಿ ಸದಸ್ಯ ನಾರಾಯಣ ನಾಯ್ಸ್ ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯೆ ಜೆಸಿಂತಾ ಡಿಸೋಜ, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ಕುಮಾರ್, ಕೆಎಸ್ಆರ್ಟಿಸಿ ಬಿ.ಸಿ.ರೋಡು ಡಿಪೋ ಮ್ಯಾನೇಜರ್ ಇಸ್ಮಾಯಿಲ್, ಪ್ರಮುಖರಾದ ಅಬ್ಬಾಸ್ ಆಲಿ, ಇಬ್ರಾಹಿಂ ನವಾಜ್, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ಲವಿನಾ ವಿಲ್ಮಾ ಮೊರಾಸ್, ಜೋಸ್ಮಿನ್ ಡಿಸೋಜ, ಮಂಜುಳ ಕುಶಲ ಮೊದಲಾದವರಿದ್ದರು