ಕಾಸರಗೋಡು, ಜು. 14 (DaijiworldNews/AA): ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಬಡಿದು ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡ ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಸೋಮವಾರ ನಡೆದಿದೆ.

ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಕಣ್ಣೂರು ಇರಿಕ್ಕೂರು ನಿವಾಸಿಗಳಾದ ಅಬ್ದುಲ್ ನಾಸರ್, ನುಸ್ರತ್, ಅಯೂಬ್, ಜಾಫರ್ ಗಾಯಗೊಂಡವರು. ಈ ಪೈಕಿ ಅಬ್ದುಲ್ ನಾಸರ್ ರನ್ನು ಮಂಗಳೂರು ಹಾಗೂ ಉಳಿದವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದವರು ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.