ಮಂಗಳೂರು, ಜು. 13 (DaijiworldNews/TA): ನಗರದ ಹೊರವಲಯದ ಫರಂಗಿಪೇಟೆ ಅರ್ಕುಳದಲ್ಲಿ ಕಾರ್ಯಾಚರಿಸುತ್ತಿರುವ ಡಾ.ತುಂಗಾಸ್ ಮನಸ್ವಿನಿ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಪಂಚಕರ್ಮ ವಿಭಾಗದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ.ಕೆ .ರವೀಂದ್ರ ಭಟ್ ವಿಭಾಗದ ಉದ್ಘಾಟನೆಯನ್ನು ನೆರವೇರಿಸಿ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಯ ಬಗ್ಗೆ ಮಾತನಾಡಿದರು .











ದೀಪ ಬೆಳಗಿಸುವ ಮೂಲಕ ನಡೆದ ಉದ್ಘಾಟನೆಯಲ್ಲಿ ಗಣ್ಯ ಅತಿಥಿಗಳ ಜೊತೆ ಡಾ.ರವೀಶ ತುಂಗಾ ಮತ್ತು ಡಾ ಸುಚಿತ್ರ ತುಂಗಾ ದಂಪತಿಗಳು ಕೂಡ ಜೊತೆಯಾದರು. ಆರೋಗ್ಯವಂತ ವ್ಯಕ್ತಿಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರೋಗಿಗಳಲ್ಲಿ ರೋಗವನ್ನು ಗುಣಪಡಿಸುವ ಅತ್ಯದ್ಭುತ ಪಂಚಕರ್ಮ ಚಿಕಿತ್ಸೆಯ ಮಹತ್ವದ ಬಗ್ಗೆ ಡಾ.ರವೀಶ ತುಂಗಾ ತಿಳಿಸಿದರು.
ಆಯುರ್ವೇದ ಮತ್ತು ಪಂಚಕರ್ಮ ವಿಭಾಗದ ಮುಖ್ಯಸ್ಥರು ಮತ್ತು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಗಣೇಶ ಮೊಗ್ರ ಅವರು ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಸಲಹೆಗಾರರಾದ ವಿಶ್ವನಾಥ ತುಂಗಾ , ಕಾರ್ಯದರ್ಶಿಗಳಾದ ನಾಗರಾಜ ತುಂಗಾ , ಪ್ರೇರಣಾ ತುಂಗಾ , ಸಾಯೀಶ್ , ಮನಸ್ವಿನಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಬ್ರಿಡ್ಜೆಟ್ ಡಿಸಿಲ್ವ ,ಡಾ.ಸರ್ವೇಶ್ ಕುಮಾರ್ ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.