ಬಂಟ್ವಾಳ,ಜು. 08 (DaijiworldNews/ AK): ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮಾ ಜೆನೆವಿವ್ ಜ್ಯೋತಿ ಡಿಸೋಜ ರವರು ಪಿಎಚ್.ಡಿ.ಪದವಿಗೆ ಭಾಜನರಾಗಿದ್ದಾರೆ.

ಮಣಿಪಾಲ ನರ್ಸಿಂಗ್ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಲಿನು ಸರ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫೆಕ್ಟಿವ್ ನೆಸ್ ಆಫ್ ಸೆಲ್ಫ್ ಕೇರ್ ಎಜ್ಯುಕೇಷನ್ ಪ್ರಾಗ್ರೇಮ್ ಆನ್ ಕ್ಲಿನಿಕಲ್ ಆವ್ಟ್ ಕಮ್ಸ್ ಆಂಡ್ ಸೆಲ್ಫ್ ಕೇರ್ ಬಿಹೇವಿಯರ್ ಎಮಾಂಗ್ ಹಾರ್ಟ್ ಪೇಲೂರ್ ಕೇಸಸ್” ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಎಕಾಡಮಿ ಆಫ್ ಹೈಯರ್ ಎಜ್ಯಕೇಷನ್ ವಿ ವಿ ಯು ಪಿಎಚ್. ಡಿ. ಪದವಿ ಪ್ರದಾನ ಮಾಡಿದೆ.
ಇವರು ಡಾ. ಜೇಮ್ಸ್ ಗೋನ್ಸಾಲ್ವಿಸ್(ಪ್ರದ್ಯಾಪಕರು, ಅಮೇರಿಕನ್ ಯುನಿವರ್ಸಿಟಿ ಆಫ್ ಆಂಟಿಗ್ವಾ)ರವರ ಪತ್ನಿ, ಸಿರಿಲ್ ಡಿಸೋಜ ಹಾಗೂ ದಿವಂಗತ ಲೂಸಿ ಡಿಸೋಜ, ಕುಪ್ರಾಡಿ ಲೊರೆಟೊ ರವರ ಪುತ್ರಿ , ಗ್ಲೇಡಿಸ್ ಡಿಸೋಜ ( ಸಹ ಮುಖ್ಯೋಪಾಧ್ಯಾಯರು, ಇನ್ಫಂಟ್ ಜೀಸಸ್ ಶಾಲೆ, ಮೊಡಂಕಾಪು) , ಕೆವಿನ್ ಡಿಸೋಜ(ಖ್ಯಾತ ಎಂ.ಸಿ.), ಜ್ಯೋ ಪ್ರದೀಪ್ ಡಿಸೋಜ (ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,ಬಂಟ್ವಾಳ ಇವರ ಸಹೋದರಿಯಾಗಿದ್ದಾರೆ.